Trending

ಗುಜರಾತ್​ ಮಾಜಿ ಸಿಎಂ ರೂಪಾನಿ ಅವರ ಅದೃಷ್ಟ ಸಂಖ್ಯೆಯೇ, ಈಗ ದುರಾದೃಷ್ಟವಾಯಿತೇ? : ಅಷ್ಟಕ್ಕೂ ಆ ನಂಬರ್​ ಯಾವುದು ಗೊತ್ತಾ?

Spread the love

ಅಹಮದಾಬಾದ್​: ಏರ್​ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ 241 ಮಂದಿಯಲ್ಲಿ ಗುಜರಾತ್​ ಮಾಜಿ ಸಿಎಂ ವಿಜಯ ರೂಪಾನಿ ಕೂಡ ಇದ್ದಾರೆ. ಮೂಲಗಳ ಪ್ರಕಾರ ಮಾಜಿ ಸಿಎಂ ವಿಜಯ್​ ರೂಪಾನಿ ಅವರು ಲಂಡನ್​ನಲ್ಲಿ ಇದ್ದ ತಮ್ಮ ಹೆಂಡತಿ ಮತ್ತು ಮಗಳ ಭೇಟಿಗಾಗಿ ಪ್ರಯಾಣ ಬೆಳೆಸಿದ್ದರು. ಆದರೆ, ಭೀಕರ ಅಪಘಾತದಲ್ಲಿ ಮರಣ ಹೊಂದಿದ್ದಾರೆ.

ಈ ಸಾವಿನ ಸುದ್ದಿ ಬೆನ್ನಲ್ಲೇ ವಿಜಯ್​ ರೂಪಾನಿ ಅವರ ಪತ್ನಿ ಅಂಜಲಿ ರೂಪಾನಿ ಮತ್ತು ಮಗಳು ಶುಕ್ರವಾರ ಬೆಳಗ್ಗೆ ಅಹಮದಾಬಾದ್​ಗೆ ಬಂದಿಳಿದಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯ ಗೃಹ ಸಚಿವ ಹರ್ಷ ಸಂಘ್ವಿ ಅವರನ್ನು ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಅವರನ್ನು ಭೇಟಿಯಾಗಿದ್ದಾರೆ ಎಂಬ ಮಾಹಿತಿ ಇದೆ.

ಇನ್ನು ವಿಜಯ ರೂಪಾನಿ ಅವರ ಸಾವು ಎಂತಹ ದುರಂತ ಎಂದರೆ, ಅವರ ಅದೃಷ್ಟದ ಸಂಖ್ಯೆ ಎಂದು ನಂಬಿದ್ದ ದಿನದಂದೇ ಈ ಸಾವು ಸಂಭವಿಸಿದೆ.

ವಿಜಯ್​ ರೂಪಾನಿ ಅವರು 1206 ತಮ್ಮ ಅದೃಷ್ಟದ ಸಂಖ್ಯೆ ಎಂದು ನಂಬಿದ್ದರು. ಅವರ ಮನೆ ಸಂಖ್ಯೆ ಕೂಡ 1206 ಆಗಿತ್ತು. ಅಲ್ಲದೇ ಅವರ ಮೊದಲ ಕಾರಿನ ಸಂಖ್ಯೆ ಕೂಡ 1206 ಆಗಿತ್ತು. ಇದಕ್ಕೆ ಮೊದಲು ಖರೀದಿ ಮಾಡಿದ್ದ ಅವರ ಸ್ಕೂಟರ್​ ನಂಬರ್​ ಕೂಡಾ 1206 ನಂಬರೇ ಆಗಿತ್ತು.

ತಮ್ಮ ಜೀವನದ ಆರಂಭದ ಎಲ್ಲಾ ಕ್ಷಣದಲ್ಲೂ ಈ ಸಂಖ್ಯೆಯನ್ನು ತಮ್ಮ ಅದೃಷ್ಟದ ಅಂಕಿ ಎಂದು ರೂಪಾನಿ ನಂಬಿದ್ದರು. ಇಂದಿಗೂ ಅವರ ಮನೆ ಮುಂದೆ ಈ ನಂಬರ್​ನ ಸ್ಕೀಟರ್​ ಮತ್ತು ಕಾರನ್ನು ಕಾಣಬಹುದಾಗಿದೆ. ಆದರೆ, ದುರಂತ ಎಂದರೆ, ಇದೇ ಅದೃಷ್ಟದ ಸಂಖ್ಯೆ ಎಂದು ನಂಬಿದ್ದ ದಿನವೇ ಅವರ ಸಾವು ಸಂಭವಿಸಿದೆ. ವಿಮಾನ ದುರಂತ ನಡೆದಿದ್ದು ಜೂನ್​ 12 ರಂದು ಅಂದರೆ, 12/06. ಅದೃಷ್ಟ ಎಂದು ನಂಬಿದ್ದ ಅವರ ಈ ಸಂಖ್ಯೆ ಅವರಿಗೆ ದುರಾದೃಷ್ಟವಾಯಿತಾ ಎಂಬ ಅನುಮಾನ ಕಾಡುತ್ತಿದೆ.

ರೂಪಾನಿ ಅವರ ಸಂಬಂಧಿಕರು ಮತ್ತು ಸ್ನೇಹಿತರ ಪ್ರಕಾರ, ಅವರು ಯಾವಾಗಲೂ ಈ ಸಂಖ್ಯೆಯನ್ನು ಅದೃಷ್ಟ ಎಂದು ನಂಬಿದ್ದರು, ಇದನ್ನು ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಪ್ರಮುಖ ಕ್ಷಣದಲ್ಲೂ ಕಾಯ್ದುಕೊಂಡಿದ್ದರು. ಆದರೆ, ಈ ಸಂಖ್ಯೆ (12/06) ದಿನವೇ ಜೀವನದ ಕೊನೆಯ ದಿನಾಂಕವಾಗಿದೆ.

[pj-news-ticker]