Trending

ಭದ್ರಾ ಡ್ಯಾಂ ನೋಡಲು ಬಂದು ಹಿನ್ನೀರುಪಾಲಾದ ತಂದೆ, ಮಗ

Spread the love

ಶಿವಮೊಗ್ಗ: ಭದ್ರಾ ಡ್ಯಾಂ ನೋಡಲು ಕುಟುಂಬದೊಂದಿಗೆ ತೆರಳಿದ್ದ ತಂದೆ, ಮಗ ಹಿನ್ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಭಾನುವಾರ ಸಂಭವಿಸಿದೆ.

ಭದ್ರಾವತಿ ಪಟ್ಟಣದ ಭೂತನಗುಡಿಯ ನಿವಾಸಿ ಮಹಮ್ಮದ್ ಜಾಬರ್ (58) ತಮ್ಮ ಕುಟುಂಬದ ಜೊತೆ ಭದ್ರಾವತಿ ತಾಲೂಕಿನ ಭದ್ರಾ ಡ್ಯಾಂಗೆ ಹೋಗಿದ್ದರು. ಈ ವೇಳೆ ಮಹಮ್ಮದ್ ಜಾಬರ್ ಮಗ ಜಾವದ್ (14) ಹಿನ್ನೀರಿನಲ್ಲಿ‌ ಆಟ ಆಡುತ್ತಾ ನೀರಿನ ಸೆಳವಿಗೆ ಸಿಲುಕಿ ಕೊಚ್ಚಿ ಹೋಗಿದ್ದಾನೆ. ಕೊಚ್ಚಿ ಹೋಗುತ್ತಿದ್ದ ಮಗನನ್ನು ರಕ್ಷಿಸಲು ತಂದೆ ನೀರಿಗೆ ಇಳಿದಿದ್ದಾರೆ. ಆದರೆ ದುರದೃಷ್ಟವಶಾತ್ ತಂದೆ ಹಾಗೂ ಮಗ ಇಬ್ಬರು ನೀರುಪಾಲಾಗಿದ್ಧಾರೆ ಎಂದು ಪೊಲೀಸರು ಮಾಹಿತಿ ನೀಡಿದ್ಧಾರೆ.

ಘಟನೆ ಮಾಹಿತಿ ತಿಳಿದು ಭದ್ರಾವತಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ನಂತರ ಅಗ್ನಿಶಾಮಕ ದಳದವರನ್ನು ಕರೆಯಿಸಿ, ಇಬ್ಬರಿಗೂ ಹುಡುಕಾಟ ನಡೆಸಲಾಗಿದ್ದು, ಜಾವದ್ ಮೃತದೇಹ ಪತ್ತೆಯಾಗಿದೆ. ಜಾಬರ್ ಶವಕ್ಕಾಗಿ ಶೋಧ ನಡೆಸಲಾಗುತ್ತಿದೆ. ರಾತ್ರಿಯಾದ ಕಾರಣ, ಸೋಮವಾರ ಮುಂಜಾನೆ ಹುಡುಕಾಟ ಆರಂಭಿಸಲಾಗಿದೆ.

ಈ ಕುರಿತು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

[pj-news-ticker]