Trending

ಕೋಟ್ಯಧಿಪತಿ ಮಂಗಳಮುಖಿಯ ಭೀಕರ ಹತ್ಯೆ : ಆಸ್ತಿಗಾಗಿ ಗಂಡನೇ ಕೊಲೆ ಮಾಡಿದ್ನಾ?

Spread the love

ಬೆಂಗಳೂರು: ಮಂಗಳಮುಖಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೆ.ಆರ್.ಪುರದ ಬಸವೇಶ್ವರ ನಗರದ ಗಾಯತ್ರಿ ಲೇಔಟ್‌ನಲ್ಲಿ ನಡೆದಿದೆ. ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಕೊಚ್ಚಿ ಮಂಗಳಮುಖಿಯನ್ನು ಕೊಲೆ ಮಾಡಿದ್ದಾರೆ. ತನುಶ್ರೀ (40) ಮೃತ ಮಂಗಳಮುಖಿಯಾಗಿದ್ದು, ಕಳೆದ 3 ತಿಂಗಳ ಹಿಂದೆಯಷ್ಟೇ ಈಕೆ ಜಗನ್ನಾಥ್ ಎಂಬಾತನನ್ನು ಮದುವೆಯಾಗಿದ್ದಳು.

ಇದೀಗ ಮನೆಯಲ್ಲಿಯೇ ಈಕೆಯ ಕೊಲೆ ನಡೆದಿದೆ. ಕನ್ನಡಪರ ಸಂಘಟನೆ ಹಾಗೂ ಎನ್‌ಜಿಒ ಮೂಲಕ ಗುರುತಿಸಿಕೊಂಡಿದ್ದ ಮಂಗಳಮುಖಿ ತನುಶ್ರೀ ಕೋಟ್ಯಂತರ ಆಸ್ತಿ ಹೊಂದಿದ್ದಳು. ಈಕೆಯ ಹಣಕ್ಕಾಗಿಯೇ ಮದು‌ವೆ ಮಾಡಿಕೊಂಡು ಜಗನ್ನಾಥ್ ಕೊಲೆ ಮಾಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

ಕೊಲೆ ಬಳಿಕ ಪತಿ ಜಗನ್ನಾಥ್ ಹಾಗೂ ತನುಶ್ರೀ ಅವರ ಮನೆಗೆಲಸದಾಕೆ ಇಬ್ಬರೂ ಪರಾರಿಯಾಗಿದ್ದಾರೆ. ಮಂಗಳಮುಖಿ ತನುಶ್ರೀ ರಕ್ಷಣಾ ವೇದಿಕೆ ಕಾರ್ಯಕರ್ತೆ ಆಗಿದ್ದರು. ಸಂಗಮ ಎನ್ ಜಿಓ ನಡೆಸುತ್ತಿದ್ದರು. ಈಕೆ 40 ವರ್ಷಕ್ಕೆ ಬರುವ ವೇಳೆಗೆ ಕೋಟಿ ಕೋಟಿ ಆಸ್ತಿಯನ್ನು ಹೊಂದಿದ್ದಳು. ಈಕೆಯ ಆಸ್ತಿ ನೋಡಿ ಜಗನ್ನಾಥ್ ಮದುವೆ ಮಾಡಿಕೊಂಡಿದ್ದ. ಹೆಂಡತಿ ಕೊಲೆ ಬೆನ್ನಲ್ಲಿಯೇ ಪರಾರಿ ಆಗಿದ್ದಾನೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕೆ.ಆರ್.ಪುರಂ ಠಾಣೆಯ ಪೋಲಿಸರು ಪರಿಶೀಲನೆ ನಡೆಸಿದ್ದಾರೆ. ನಾಯಕಿಯಂತಿದ್ದ ತನುಶ್ರೀಯನ್ನು ಕಳೆದುಕೊಂಡು ಇತರ ಮಂಗಳಮುಖಿಯರು ದುಃಖಿತರಾಗಿದ್ದಾರೆ. ಪೊಲೀಸರು ಪರಾರಿಯಾಗಿರುವ ಪತಿ ಜಗನ್ನಾಥ್ ಹಾಗೂ ತನುಶ್ರೀ ಮನೆ ಕೆಲಸದಾಕೆ ಪತ್ತೆಗೆ ಹುಡುಕಾಟ ಆರಂಭಿಸಿದ್ದಾರೆ.

 

[pj-news-ticker]