Trending

ಮಂಗನ ಕಾಯಿಲೆಗೆ ತೀರ್ಥಹಳ್ಳಿಯ ಬಾಲಕ ಬಲಿ

Spread the love

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಂಗನ ಕಾಯಿಲೆಯಿಂದ (ಕ್ಯಾಸನೂರು ಫಾರೆಸ್ಟ್ ಡಿಸೀಸ್ – ಕೆಎಫ್ಡಿ) ಎರಡನೇ ತರಗತಿಯ ಬಾಲಕನೋರ್ವ ಬಲಿಯಾಗಿದ್ದಾನೆ. ಈತನಿಗೆ ಕೆಎಫ್ಡಿ ವೈರಸ್ ಪಾಸಿಟಿವ್ ಕಂಡು ಬಂದಿತ್ತು.

ತೀರ್ಥಹಳ್ಳಿಯ ಕೋಣಂದೂರು ಸಮೀಪದ ದತ್ತರಾಜಪುರ ಗ್ರಾಮದ ರಾಮು ಹಾಗೂ ಮಮತಾ ಎಂಬವರ ಪುತ್ರ ರಚಿತ್ ಮೃತಪಟ್ಟ ಬಾಲಕ. ಕೆಎಫ್ಡಿಯಿಂದ ಗುರುವಾರ ರಾತ್ರಿ ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಏಪ್ರಿಲ್ 3ರಂದು ಮೃತ ಬಾಲಕನ ಸಹೋದರಿಗೆ ಜ್ವರ ಬಂದಿತ್ತು. ಪರೀಕ್ಷೆಗೆ ಒಳಪಡಿಸಿದಾಗ ಆಕೆಯಲ್ಲಿ ಕೆಎಫ್ಡಿ ಪಾಸಿಟಿವ್ ಬಂದಿತ್ತು. ಮರುದಿನ ಬಾಲಕಿಯ ಮನೆಯವರಲ್ಲಿ ಪರೀಕ್ಷೆ ನಡೆಸಿದಾಗ ಬಾಲಕನಿಗೆ ಸಣ್ಣ ಜ್ವರ ಕಾಣಿಸಿಕೊಂಡಿತ್ತು. ಆತನಿಗೂ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿದೆ.

Kfಏಪ್ರಿಲ್ 5ರಂದು ತೀರ್ಥಹಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 12 ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಚಿತ್ ಚಿಕಿತ್ಸೆಗೆ ಸ್ಪಂದಿಸದೆ ಕಳೆದ ರಾತ್ರಿ ಮೃತಪಟ್ಟಿದ್ದಾನೆ.

 

[pj-news-ticker]