ಶಿವಮೊಗ್ಗ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಶಿವಮೊಗ್ಗ ವಿಭಾಗದಿಂದ, ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣ / ಕಾಚಿನಕಟ್ಟೆಗೆ 2 ನಗರ ಸಾರಿಗೆ ಬಸ್ಗಳ ಸಂಚಾರ ಆರಂಭಿಸಿದೆ.
ಶಿವಮೊಗ್ಗ ಬಸ್ ನಿಲ್ದಾಣದಿಂದ ಬೆಳಗ್ಗೆ 9. 45, 10.00, 12.45, 02.00, 03.00 ಮತ್ತು 3.30 ಕ್ಕೆ ಬಸ್ ಗಳು ಹೊರಡಲಿವೆ.
ಅದೇ ರೀತಿ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣ / ಕಾಚಿನಕಟ್ಟೆಯಿಂದ ಬೆಳಿಗ್ಗೆ 10.40, 11.40, 01.30, 02.45, 3.35 ಹಾಗೂ 4.05 ರ ಸಮಯದಲ್ಲಿ ಬಸ್ ಗಳು ಹೊರಡಲಿವೆ.
ಸಾರ್ವಜನಿಕರು ಸದರಿ ಸಿಟಿ ಬಸ್ಗಳ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
