Trending

3 ತಿಂಗಳಲ್ಲಿ ದಂಡ ಕಟ್ಟದಿದ್ದರೆ, ಚಾಲನಾ ಪರವಾನಿಗೆಯೇ ರದ್ದು?

Spread the love

ಹೊಸದಿಲ್ಲಿ: ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣಗಳಲ್ಲಿ 3 ತಿಂಗಳೊಳಗೆ ದಂಡವನ್ನು ಪಾವತಿ ಮಾಡದಿದ್ದರೆ ಚಾಲನಾ ಪರವಾನಿಗೆಯೇ ರದ್ದಾಗಲಿದೆ. ಈ ರೀತಿಯ ನಿಯಮಗಳನ್ನು ಜಾರಿ ಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಕೆಂಪು ದೀಪ ಇದ್ದಾಗ 3 ಬಾರಿ ಸಿಗ್ನಲ್‌ ಜಂಪ್‌ ಮಾಡಿದರೆ ಪರವಾನಗಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.

ಸಂಚಾರ ವ್ಯವಸ್ಥೆಯನ್ನು ಉತ್ತಮಗೊಳಿಸಲು ಸುಪ್ರೀಂಕೋರ್ಟ್‌ ಸೂಚಿಸಿದ ಬೆನ್ನಲ್ಲೇ ಈ ಎಲ್ಲಾ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಅಲ್ಲದೇ ದಂಡ ವಸೂಲಾತಿಯಲ್ಲಿ ಕಳಪೆ ಸಾಧನೆ ಮಾಡಿದ ರಾಜ್ಯಗಳ ಪಟ್ಟಿಯಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದೆ. 4468 ಕೋಟಿ ರೂ. ದಂಡ ಬಾಕಿ ಇದ್ದು, ಶೇ.14ರಷ್ಟನ್ನು ಮಾತ್ರ ವಸೂಲಿ ಮಾಡಲಾಗಿದೆ. ಕರ್ನಾಟಕ 2ನೇ ಸ್ಥಾನದಲ್ಲಿದ್ದು, 49.3 ಕೋಟಿ ರೂ.ಗಳಲ್ಲಿ ಶೇ.21ರಷ್ಟು ಮಾತ್ರ ವಸೂಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

[pj-news-ticker]