Trending

ತೀರ್ಥಹಳ್ಳಿ : ಧಾರಾಕಾರ ಮಳೆಗೆ ಹಾರಿ ಹೋದ ಮನೆಯ ಹೆಂಚುಗಳು

Spread the love

ತೀರ್ಥಹಳ್ಳಿ : ವರ್ಷದ ಮೊದಲ ಮಳೆಯ ಸಿಂಚನವಾಗಿದ್ದು, ಗಾಳಿ ಮಳೆಗೆ ಮನೆಯ ಹೆಂಚುಗಳು ಹಾರಿ ಹೋಗಿರುವ ಘಟನೆ ಗುರುವಾರ ಬೆಜ್ಜವಳ್ಳಿಯಲ್ಲಿ ನಡೆದಿದೆ.

ತಾಲೂಕಿನ ವಿವಿಧ ಭಾಗದಲ್ಲಿ ಸಂಜೆಯ ವೇಳೆ ಮಳೆಯಾಗಿದ್ದು ಅದರಲ್ಲೂ ಬೆಜ್ಜವಳ್ಳಿ ಭಾಗದಲ್ಲಿ ಗುಡುಗು ಸಿಡಿಲಿನ ಜೊತೆಗೆ ಭಾರೀ ಮಳೆಯಾಗಿದೆ.

ಗಾಳಿ ಮಳೆಯ ರಭಸಕ್ಕೆ ಮನೆಯ ಹೆಂಚುಗಳು ಹಾರಿ ಹೋಗಿವೆ.

ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಜನರಿಗೆ ವರುಣ ತಂಪೆರೆದಿದ್ದು ಇನ್ನು ಎರಡು ದಿನ ಮಳೆಯಾದರೆ ಬಿಸಿಲಿನ ತಾಪ ಸ್ವಲ್ಪ ಮಟ್ಟಿಗೆ ಕಡಿಮೆ ಆಗುವ ಸಾಧ್ಯತೆ ಇದೆ.

[pj-news-ticker]