Trending

ಮಾಜಿ ಸಚಿವ ಹೆಚ್ ಎಂ ರೇವಣ್ಣರಿಂದ ಹಲ್ಲೆ ಆರೋಪ : ಮಹಿಳಾ ಆಯೋಗಕ್ಕೆ ದೂರು

Spread the love

ಬೆಂಗಳೂರು‌ : ಮಾಜಿ ಸಚಿವ ಹಾಗೂ ಗ್ಯಾರಂಟಿ ಯೋಜನೆಗಳ‌ ಅನುಷ್ಠಾನ ಸಮಿತಿಯ ಅಧ್ಯಕ್ಷ ಹೆಚ್. ಎಂ ರೇವಣ್ಣ ಅವರು ಜಾತಿನಿಂದನೆ, ಹಲ್ಲೆ ಮಾಡಿರುವುದಾಗಿ ಆರೋಪಿಸಿ ಕಾಂಗ್ರೆಸ್‌ ಕಾರ್ಯಕರ್ತೆ ನಂದಿನಿ ನಾಗರಾಜ್ ಅವರು ರಾಜ್ಯ ಮಹಿಳಾ ಆಯೋಗಕ್ಕೆ ದೂರು‌ ನೀಡಿದ್ದಾರೆ.

ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರನ್ನ ಇಂದು ಭೇಟಿಯಾಗಿ ನಂದಿನಿ ನಾಗರಾಜ್ ದೂರು ಸಲ್ಲಿಸಿದ್ದಾರೆ. ತಮಗೆ ಅವಾಚ್ಯ ಶಬ್ಧಗಳಿಂದ ನಿಂದಿಸಲಾಗಿದೆ, ದೌರ್ಜನ್ಯವೆಸಗಿ ಹಲ್ಲೆ ಮಾಡಲಾಗಿದೆ. ದಲಿತ ಮಹಿಳೆಯಾದ ತಾವು ನ್ಯಾಯಕ್ಕಾಗಿ ಬಂದಿದ್ದೇನೆ ಎಂದು ನಂದಿನಿ ನಾಗರಾಜ್ ಎಂಬುವವರು ದೂರು ನೀಡಿದ್ದಾರೆ.

‘ದೂರಿನನ್ವಯ ಸಂಬಂಧಪಟ್ಟ ಡಿಸಿಪಿಯವರಿಗೆ ಈಗಲೇ ಪತ್ರ ಬರೆದು ತನಿಖೆಯ ವರದಿ ಕೇಳುತ್ತೇನೆ. ಮಹಿಳಾ ಆಯೋಗದಲ್ಲಿ ಪಕ್ಷಗಳ ವಿಚಾರ ಬರುವುದಿಲ್ಲ. ಇಲ್ಲಿ ಹೆಣ್ಣು ಮಾತ್ರ ಮುಖ್ಯ. ಹೆಚ್. ಎಂ ರೇವಣ್ಣ ಅವರಿಗೂ ಪತ್ರ ಬರೆದು ಸ್ಪಷ್ಟನೆ ಕೇಳುತ್ತೇವೆ’ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಹೇಳಿದ್ದಾರೆ.

[pj-news-ticker]