ನೆಲಮಂಗಲ: ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರಿಗೆ ನಟ ವಿನೋದ್ ರಾಜ್ ಅವರು ವಾಕರ್ಗಳನ್ನು ವಿತರಿಸಿದ್ದಾರೆ.
ನೆಲಮಂಗಲದ ಮಂಚೇನಹಳ್ಳಿ ಗ್ರಾಮದಲ್ಲಿ ಡಾ. ಪುನೀತ್ ರಾಜ್ಕುಮಾರ್ ಯುವಕರ ಸಂಘದಿಂದ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬವನ್ನು ಸೋಮವಾರ ಆಚರಣೆ ಮಾಡಲಾಗಿದ್ದು, ಈ ವೇಳೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿನೋದ್ ರಾಜ್ ಅವರು, ಹಿರಿಯ ನಾಗರಿಕರಿಗೆ ವಾಕರ್ಗಳನ್ನು ವಿತರಿಸಿದ್ದಾರೆ.
ಈ ವೇಳೆ ನಟ ವಿನೋದ್ ರಾಜ್ ಅವರು ಮಾತನಾಡಿ, ಮಾಯಾ ರೀತಿಯಲ್ಲಿ ಬಂದು ಮಾಯಾ ರೀತಿಯಾಗಿ ಪುನೀತ್ ರಾಜ್ ಕುಮಾರ್ ಹೋಗಿದ್ದಾರೆ. ಬದುಕಿದ್ದಾಗ ಏನಾದರೂ ಸಾಧನೆ ಮಾಡಬೇಕೆಂದು ತೋರಿಸಿಕೊಟ್ಟವರು ನಟ ಪುನೀತ್ ಎಂದು ಭಾವುಕರಾಗಿದ್ದಾರೆ.
