Trending

ಬಿಗ್ ಬಾಸ್ ಕನ್ನಡ ಸೀಸನ್ 11ರ ಟ್ರೋಫಿ ಎತ್ತಿ ಹಿಡಿದ ಹನುಮಂತ

Spread the love

ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ವಿನ್ನರ್ ಆಗಿ ಹನುಮಂತ ಹೊರಹೊಮ್ಮಿದ್ದಾರೆ. ಎಲ್ಲರೂ ತ್ರಿವಿಕ್ರಮ್ ಜಯಶಾಲಿಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ, ವೇದಿಕೆ ಮೇಲೆ ಕಿಚ್ಚ ಸುದೀಪ್ ಅವರು ಹನುಮಂತು ಅವರ ಕೈ ಎತ್ತುವ ಮೂಲಕ ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

ಈ ಮೂಲಕ ಇವರು 50 ಲಕ್ಷ ಹಣವನ್ನು ಗೆದ್ದು ಟ್ರೋಫಿ ಎತ್ತಿ ಹಿಡಿದಿದ್ದಾರೆ. ಬಿಬಿಕೆ 11ನ ವಿಕಿಪೀಡಿಯಾ ಪೇಜ್ನಲ್ಲಿ ಕೂಡ ಅಧಿಕೃತ ಘೋಷಣೆಗು ಮುನ್ನವೇ ಹನುಮಂತ ಹೆಸರೇ ವಿನ್ನರ್ ಎಂದಿತ್ತು.

ಬಿಬಿಕೆ 11 ಫಿನಾಲೆಗೆ ಆರು ಜನರ ಕಂಟೆಸ್ಟೆಂಟ್ ಇದ್ದರು. ಭವ್ಯಾ ಗೌಡ, ತ್ರಿವಿಕ್ರಮ್, ಹನುಮಂತ, ಉಗ್ರಂ ಮಂಜು, ರಜತ್ ಕಿಶನ್ ಹಾಗೂ ಮೋಕ್ಷಿತಾ ಫಿನಾಲೆ ಸ್ಪರ್ಧಿಗಳಾಗಿದ್ದರು. ಇವರಲ್ಲಿ ಶನಿವಾರ ಭವ್ಯಾ ಗೌಡ ಮೊದಲಿಗರಾಗಿ ಹೊರಬಂದರು. ಬಳಿಕ ಉಗ್ರಂ ಮಂಜು 4ನೇ ರನ್ನರ್ ಅಪ್ ಆಗಿ ಆಚೆ ಬಂದರು. 3ನೇ ರನ್ನರ್ ಅಪ್ ಆಗಿ ಮೋಕ್ಷಿತಾ ಹೊರಬಂದರು.

ಕೊನೆಯಲ್ಲಿ ರಜತ್ ಕಿಶನ್, ಹನುಮಂತ ಹಾಗೂ ತ್ರಿವಿಕ್ರಮ್ ಉಳಿದುಕೊಂಡರು. ಇವರನ್ನು ಕಿಚ್ಚ ಸುದೀಪ್ ಮನೆಯೊಳಗೆ ಹೋಗಿ ಸ್ಟೇಜ್ ಮೇಲೆ ಕರೆದುಕೊಂಡು ಬಂದರು. ಸ್ಟೇಜ್ಗೆ ಬರುವ ಮುನ್ನ ಸುದೀಪ್ ಅವರು ಬಿಗ್ ಬಾಸ್ ಮನೆಯ ಮೈನ್-ಸ್ವಿಚ್ ಆಫ್ ಮಾಡಿ ಎಲ್ಲ ಲೈಟ್ಗಳನ್ನು ನಂದಿಸಿ ಹೊರಟರು.

ಸ್ಟೇಜ್ ಮೇಲೆ ನಡೆದ ರೆಡ್ ಲೈಟ್ – ಗ್ರೀನ್ ಲೈಟ್ ಚಟುವಟಿಕೆಯಲ್ಲಿ ರೆಡ್ ಲೈಟ್ ಪಡೆದುಕೊಂಡು 2ನೇ ರನ್ನರ್ ಅಪ್ ಆಗಿ ರಜತ್ ಕಿಶನ್ ಹೊರಗುಳಿದರು. ಅಂತಿಮವಾಗಿ ಹನುಮಂತ ತ್ರಿವಿಕ್ರಮ್ ಪೈಕಿ ಕಿಚ್ಚ ಸುದೀಪ್ ಅವರು ಹಳ್ಳಿ ಹೈದನ್ ಕೈ ಎತ್ತುವ ಮೂಲಕ ವಿನ್ನರ್ ಘೋಷಣೆ ಮಾಡಿದ್ದಾರೆ.

ತ್ರಿವಿಕ್ರಮ್ ರನ್ನರ್-ಅಪ್ ಆಗಿದ್ದಾರೆ. ಟ್ರೋಫಿ ಗೆಲ್ಲ ಬೇಕು ಎಂಬುದು ಹನುಮಂತ ಅವರ ದೊಡ್ಡ ಕನಸು ಆಗಿರಲಿಲ್ಲ. ನನಗೆ ಕಿಚ್ಚನ ಚಪ್ಪಾಳೆ ಸಿಕ್ಕಿದ್ದೆ ದೊಡ್ಡ ಗೆಲುವು ಎಂದಿದ್ದರು. ಅತ್ತ ತ್ರಿವಿಕ್ರಮ್ ಅವರಿಗೆ ಟ್ರೋಫಿ ಗೆಲ್ಲುವುದು ದೊಡ್ಡ ಕನಸಾಗಿತ್ತು. ಇದೀಗ ಆ ಕನಸು ನುಚ್ಚುನೂರಾಗಿದೆ. ಹನುಮಂತ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

ಸೀಸನ್ 11ರ ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಸಿಂಗರ್ ಹನುಮಂತ ತಮ್ಮ ನಡತೆ, ಮಾತಿನ ಶೈಲಿಗಳಿಂದಲೇ ಕೇವಲ ಸ್ಪರ್ಧಿಗಳನ್ನು ಮಾತ್ರವಲ್ಲದೆ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸಿದ್ದಾರೆ. ಇವರ ಗ್ರಾಮೀಣ ಸೊಗಡಿನ ಭಾಷೆ, ಹಾಡುಗಳಿಗೆ ಎಲ್ಲರೂ ಫಿದಾ ಆಗಿದ್ದಾರೆ.

ಉತ್ತರ ಕರ್ನಾಟಕದವರಾದ ಇವರು ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಗೆಲ್ಲಬಹುದು ಎನ್ನಲಾಗಿತ್ತು, ಅದೀಗ ನಿಜವಾಗಿದೆ.

 

 

[pj-news-ticker]