ನವದೆಹಲಿ: 2000ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ಹಿಂಪಡೆದ ಬಳಿಕ ಒಟ್ಟು ನೋಟುಗಳ ಪೈಕಿ ಶೇ.98.12ರಷ್ಟು ನೋಟುಗಳು ವಾಪಸ್ ಬಂದಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಿಳಿಸಿದೆ.
2024ರ ಡಿ.31ಕ್ಕೆ ಅನ್ವಯವಾಗುವಂತೆ, ಕೇವಲ 6,691 ಕೋಟಿ ರೂ. ಮೌಲ್ಯದ ನೋಟುಗಳಷ್ಟೇ ಸಾರ್ವಜನಿಕರ ಬಳಿ ಬಾಕಿ ಉಳಿದಿವೆ ಎಂದು ಆರ್‌ಬಿಐ ತಿಳಿಸಿದೆ.
2023ರ ಮೇನಲ್ಲಿ ನೋಟುಗಳನ್ನು ಹಿಂಪಡೆಯುವುದಾಗಿ ಆರ್ ಬಿಐ ಘೋಷಿಸಿತ್ತು. ಸದ್ಯ ಬೆಂಗಳೂರು ಸೇರಿ ಆರ್‌ಬಿಐನ 19 ವಿತರಣಾ ಕಚೇರಿಯಲ್ಲಿ ನೋಟುಗಳನ್ನು ಹಿಂಪಡೆಯಲಾಗುತ್ತಿದೆ.
