Trending

ಶಿವಮೊಗ್ಗಕ್ಕೆ ಲಗ್ಗೆಯಿಟ್ಟ ಕಲಬೆರಕೆ ಜೇನುತುಪ್ಪ : ರಸ್ತೆ ಬದಿ ಜೇನುತುಪ್ಪ ಖರೀದಿಸುವ ಮುನ್ನ ಹುಷಾರ್

Spread the love

ಶಿವಮೊಗ್ಗ : ಶಿವಮೊಗ್ಗದಲ್ಲಿ ಕಲಬೆರಕೆ ಜೇನುತುಪ್ಪ ಮಾರಾಟದ ಹಾವಳಿ ಹೆಚ್ಚಾಗಿದೆ. ಈಗ ತಾನೇ ಕಾಡಿನಿಂದ ಜೇನು ಇಳಿಸಿ ತಂದಿದ್ದೇವೆ ಉತ್ತಮ ಗುಣಮಟ್ಟದ ಜೇನುತುಪ್ಪ ಎಂದು ರಸ್ತೆ ಬದಿಯಲ್ಲಿ ಕೂತು ಮಾರಾಟ ಮಾಡುವವರ ಬಳಿ ಖರೀದಿಸುವ ಮುನ್ನ ಒಮ್ಮೆ ಯೋಚಿಸಬೇಕಿದೆ.

ಯಾಕೆ ಅಂದರೆ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಛತ್ತಿಸ್ಗಡ್, ಬಿಹಾರ ಮೂಲದ ವ್ಯಕ್ತಿಗಳು ಶುದ್ದ ಜೇನುತುಪ್ಪ ಎಂದು ಕಲಬೆರಕೆ ಜೇನುತುಪ್ಪ ಮಾರುತ್ತಿರುವುದು ಕಂಡು ಬಂದಿದ್ದು, ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ಜೇನುತುಪ್ಪ ಮಾರಾಟ ಮಾಡದಂತೆ  ಎಚ್ಚರಿಕೆ ನೀಡಿ ಕಳಿಸಿದ್ದಾರೆ.

ಕೆಜಿಗೆ 400 ರಿಂದ 800 ರೂ ವರೆಗೆ. ನಕಲಿ ಜೇನುತುಪ್ಪ ಮಾರಾಟ ಮಾಡಿ ಯಾಮಾರಿಸುತ್ತಿದ್ದಾರೆ. ಹಾಗಾಗಿ ಇದರಿಂದ ಸಾವರ್ಜನಿಕರು ಎಚ್ಚರದಿಂದ ಇರಬೇಕು ಹಾಗೂ ರಸ್ತೆ ಬದಿಯಲ್ಲಿ ಜೇನುತುಪ್ಪ ಖರೀದಿ ಮಾಡುವ ಮುನ್ನ ಜನರು ನೂರು ಸಲ ಯೋಚಿಸಬೇಕಿದೆ.

ಇನ್ನೂ ಈ ಕಲಬೆರಕೆ ಜೇನುತುಪ್ಪ ಸೇವಿಸುವುದರಿಂದ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳು ಸಹ ಕಾಣಿಸಿಕೊಳ್ಳಬಹುದಾಗಿದೆ. ಹಾಗಾಗಿ ನಾವು ಖರೀದಿಸುವ ಜೇನುತುಪ್ಪ ಶುದ್ಧವಾ ಅಥವಾ ಕಲಬೆರಕೆಯಾ ಎಂದು ಪರಿಕ್ಷೀಸಿ ಖರೀದಿಸುವುದು ಉತ್ತಮ. ಇನ್ನೂ ಈತರಹದ ಕಲಬೆರಕೆ ಜೇನುತುಪ್ಪ ಮಾರಾಟ ಮಾಡುವುದು ಕಂಡು ಬಂದರೆ ದೂರು ನೀಡಿ. ಜೊತೆಗೆ ಕಡಿಮೆ ದರಕ್ಕೆ ಸಿಗುತ್ತೆ ಅಂತ ಖರೀದಿಸಬೇಡಿ ಎಂದು ಆರೋಗ್ಯ ಸುರಕ್ಷತಾ ಅಧಿಕಾರಿ ಹೇಳಿದ್ದಾರೆ.

ರಸ್ತೆ ಬದಿಯಲ್ಲಿ ಅಥವಾ ಅಂಗಡಿಗಳಲ್ಲಿ ಜೇನುತುಪ್ಪ ಖರೀದಿಸುವ ಮುನ್ನಾ ಪರೀಕ್ಷಿಸಿ ಖರೀದಿಸುವುದು ಉತ್ತಮ ಇದರ ಜೊತೆಗೆ ಸಂಬಂಧ ಪಟ್ಟ ಇಲಾಖೆಗಳು ಸಹ ಗಮನ ಹರಿಸುವ ಮೂಲಕ ನಕಲಿ ಜೇನುತುಪ್ಪ ಮಾರಾಟ ಜಾಲದ ವಿರುದ್ದ ಕ್ರಮ ಕೈಗೊಳ್ಳಬೇಕಿದೆ.

[pj-news-ticker]