ಶಿವಮೊಗ್ಗ: ತೆಪ್ಪವೊಂದು ಮಗುಚಿ ಬಿದ್ದ ಪರಿಣಾಮ ಮೂವರು ಯುವಕರು ನೀರುಪಾಲಾಗಿರುವ ಘಟನೆ ಇಂದು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಳಸವಳ್ಳಿಯ ಶರಾವತಿ ಹಿನ್ನೀರಿನಲ್ಲಿ ನಡೆದಿದೆ.
ರಾಜು, ಸಂದೀಪ್ ಭಟ್, ಚೇತನ್ ನಾಪತ್ತೆಯಾದ ಯುವಕರಾಗಿದ್ದಾರೆ.
ಬುಧವಾರ ಐವರು ಯುವಕರ ತಂಡ ತೆಪ್ಪದಲ್ಲಿ ಸಾಗುತ್ತಿದ್ದ ವೇಳೆ ಮಗುಚಿ ಬಿದ್ದಿದೆ ಈ ವೇಳೆ ನವೀನ್, ಯಶ್ವಂತ್ ನೀರಿನಲ್ಲಿ ಈಜಿ ದಡ ಸೇರಿದ್ದಾರೆ ಆದರೆ ರಾಜು, ಸಂದೀಪ್ ಭಟ್, ಚೇತನ್ ನೀರುಪಾಲಾಗಿದ್ದು ಅಗ್ನಿಶಾಮಕ ಸಿಬಂದಿ ಹಾಗೂ ಸ್ಥಳೀಯರಿಂದ ಶೋಧ ಕಾರ್ಯ ನಡೆಸಲಾಗುತ್ತಿದೆ.
