Trending

”ವಿಜಯೇಂದ್ರ ಏನು ಪುರೋಹಿತನಾ? ಜ್ಯೋತಿಷಿನಾ?” : ಸಿದ್ದರಾಮಯ್ಯ ಕಿಡಿ

Spread the love

ಬೆಳಗಾವಿ: ”ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಹೊಸ ಸಿಎಂ ಸ್ವಾಗತಿಸುತ್ತೇವೆ” ಎಂದಿದ್ದ ಬಿಜೆಪಿ ‌ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ‌ತಿರುಗೇಟು ನೀಡಿದ್ದಾರೆ. ”ವಿಜಯೇಂದ್ರ ಏನು ಪುರೋಹಿತನಾ? ಜ್ಯೋತಿಷಿನಾ?” ಎಂದು ಸಿಎಂ ಪ್ರಶ್ನೆ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ ”ದಸರಾ ಒಳಗೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ ಎಂದಿದ್ದರು. ದಸರಾ ಮುಗಿತಲ್ವಾ? ನಾನು ರಾಜೀನಾಮೆ ಕೊಟ್ನಾ” ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

”ವಿಜಯೇಂದ್ರ‌ಗೆ ನನ್ನ ರಾಜೀನಾಮೆ ಕೇಳುವ ನೈತಿಕತೆ ಏನಿದೆ? ಪೋಕ್ಸೋ ಕೇಸ್ ನಲ್ಲಿ ಅವರ ತಂದೆ ಯಡಿಯೂರಪ್ಪ ಬೇಲ್ ಮೇಲೆ ಇದ್ದಾರೆ.ಮೊದಲು ವಿಜಯೇಂದ್ರ‌ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು” ಎಂದು ಸಿದ್ದರಾಮಯ್ಯ ಕಿಡಿ ಯಾದರು.

[pj-news-ticker]