Trending

ಪ್ರಾಮಾಣಿಕತೆಯೇ ನನ್ನ ಆಸ್ತಿ, ಲೋಕಸಭೆ ಚುನಾವಣೆಗೆ ನಾನು ಪ್ರಚಾರ ನಡೆಸದಂತೆ ಮಾಡುವುದು ಬಿಜೆಪಿ ಗುರಿ: ಕೇಜ್ರಿವಾಲ್

Spread the love

ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆದು ಅವರನ್ನು ಬಂಧಿಸುವ ಸಾಧ್ಯತೆ ವರದಿ ದಟ್ಟವಾಗಿದ್ದು, ಈ ಮಧ್ಯೆ ಸುದ್ದಿಗೋಷ್ಠಿ ನಡೆಸಿ ದೆಹಲಿ ಸಿಎಂ ಮತ್ತು ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಯಾವುದೇ ರೀತಿಯಲ್ಲಿ ಭ್ರಷ್ಟಾಚಾರ ನಡೆಸಿಲ್ಲ. ಬಿಜೆಪಿ ನನ್ನನ್ನು ಬಂಧಿಸಲು ಬಯಸಿದೆ. ನನ್ನ ದೊಡ್ಡ ಆಸ್ತಿ ನನ್ನ ಪ್ರಾಮಾಣಿಕತೆ, ಅವರು ನಾಶಮಾಡಲು ನೋಡುತ್ತಿದ್ದಾರೆ. ನನಗೆ ಸಮನ್ಸ್ ಕಳುಹಿಸಿರುವುದು ಕಾನೂನುಬಾಹಿರ ಎಂದು ನನ್ನ ವಕೀಲರು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಬಿಜೆಪಿಯ ಉದ್ದೇಶ ನನ್ನ ತನಿಖೆಯಲ್ಲ. ಮುಂಬರುವ ಲೋಕಸಭೆ ಚುನಾವಣೆಗೆ ಪ್ರಚಾರ ಮಾಡಲು ನನಗೆ ಅವಕಾಶ ಸಿಗದಂತೆ ಮಾಡುವುದು ಅವರ ಉದ್ದೇಶವಾಗಿದೆ. ತನಿಖೆಯ ನೆಪದಲ್ಲಿ ನನ್ನನ್ನು ಕರೆದು ನಂತರ ಬಂಧಿಸಲು ನೋಡುತ್ತಿದ್ದಾರೆ ಎಂದು ಆರೋಪಿಸಿದರು.

ಅರವಿಂದ್ ಕೇಜ್ರಿವಾಲ್ ತನಿಖೆಗೆ ಸಹಕರಿಸುತ್ತಾರೆ: ದೆಹಲಿ ಮದ್ಯದ ಹಗರಣವು ನಕಲಿ ಎಂದು ಆಪ್ ನಾಯಕರು ಆರೋಪಿಸಿದ್ದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ “ಕಾನೂನು” ಸಮನ್ಸ್ ಕಳುಹಿಸಿದರೆ ಅವರು ಜಾರಿ ನಿರ್ದೇಶನಾಲಯ ತನಿಖೆಗೆ ಸಹಕರಿಸುತ್ತಾರೆ ಎಂದಿದ್ದಾರೆ. 

[pj-news-ticker]