Trending

ಪತ್ನಿಗೆ ನೇಣು ಹಾಕಿ ಆಕೆ ಒದ್ದಾಡೋದನ್ನು ವಿಡಿಯೊ ಕಾಲ್‌ನಲ್ಲಿ ಅತ್ತೆ – ಮಾವನಿಗೆ ತೋರಿಸಿದ ಗಂಡ

Spread the love

ಬಾಗಲಕೋಟೆ: ಅನೈತಿಕ ಶಂಕೆ ಹಿನ್ನೆಲೆಯಲ್ಲಿ ಪತ್ನಿಯನ್ನು ನೇಣು ಹಾಕಿ ಪತಿ ಕೊಂದಿರುವ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ನಡೆದಿದೆ.

23 ವರ್ಷದ ಭಾಗ್ಯಶ್ರೀ ಜಿಗಳೂರು ಅವರನ್ನು ಪತಿ ಪ್ರವೀಣ ಜಿಗಳೂರು ಮೊದಲು ಕಟ್ಟಿಗೆಯಿಂದ ಹಲ್ಲೆ ನಡೆಸಿ, ಬಳಿಕ ನೇಣು ಹಾಕಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.

ನೇಣಿನ ಕುಣಿಕೆಯಲ್ಲಿ ಪತ್ನಿ ನರಳಾಡುತ್ತಿದ್ದ ವೇಳೆ ವಿಡಿಯೊ ಚಿತ್ರೀಕರಿಸಿದ ಆರೋಪಿಯು, ಆಕೆಯ ತಂದೆ-ತಾಯಿಗೆ ವಿಡಿಯೊ ಕಾಲ್ ಮಾಡಿ ದೃಶ್ಯ ತೋರಿಸಿದ್ದಲ್ಲದೆ, ಕೆಲವರಿಗೆ ವಿಡಿಯೊ ಕಳುಹಿಸಿರುವುದಾಗಿ ತಿಳಿದುಬಂದಿದೆ.

ಎರಡು ತಿಂಗಳ ಹಿಂದೆ ಜಗಳದ ಕಾರಣ ತವರು ಮನೆ ಮಹಾಲಿಂಗಪುರಕ್ಕೆ ತೆರಳಿದ್ದ ಭಾಗ್ಯಶ್ರೀ ಅವರನ್ನು, “ಇನ್ನು ಚೆನ್ನಾಗಿ ಬದುಕೋಣ” ಎಂದು ಮನವೊಲಿಸಿ ಗಲಗಲಿಯ ಮನೆಗೆ ಕರೆತಂದಿದ್ದ ಪ್ರವೀಣ, ಸಂಜೆ ವೇಳೆ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ಘಟನೆ ಕುರಿತು ಮಾಹಿತಿ ಪಡೆದ ಬೀಳಗಿ ಪೊಲೀಸರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯೆಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

 

[pj-news-ticker]