Trending

ವಿಜಯೇಂದ್ರ ಅವರೇ ದಯವಿಟ್ಟು ದೆಹಲಿಗೆ ಹೋಗ್ಬೇಡಿ : ಪ್ರಿಯಾಂಕ್ ಖರ್ಗೆ

Spread the love

ಬೆಂಗಳೂರು: ವಿಜಯೇಂದ್ರ ಅವರೇ ದೆಹಲಿಗೆ ಹೋಗ್ಬೇಡಿ, ಹೋದ್ರೆ ಬಿಜೆಪಿ ಹೈಕಮಾಂಡ್ ನಿಮ್ಮ ರಾಜೀನಾಮೆ ಕೇಳುತ್ತಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಶನಿವಾರ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರ ಅಡ್ಡ ಮತದಾನದ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ ಅವರು, ವಿಜಯೇಂದ್ರ ಅವರೇ ದೆಹಲಿಗೆ ಹೋಗ್ಬೇಡಿ, ದೆಹಲಿಗೆ ಹೋದರೆ ಹೈಕಮಾಂಡ್ ರಾಜೀನಾಮೆ ಕೇಳಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಎಚ್ಚರಿಸಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ವಿಜಯೇಂದ್ರ ಹಾಗೂ ಆರ್ ಅಶೋಕ್ ನಾಯಕತ್ವದ ವಿರುದ್ಧ ಅವರ ಶಾಸಕರು ಮತ ಹಾಕಿದ್ದಾರೆ. ಪಾಪ ಯತ್ನಾಳ್ ಹೇಳಿದ್ದು ನಿಜ ಆಯಿತು. ಯತ್ನಾಳ್ ಅವರ ಪರ ವೋಟ್ ಹಾಕಿಲ್ಲ ಅಂದ್ರೇ ಇನ್ನೊಂದು ಕಡಿಮೆಯಾಗುತ್ತಿತ್ತು. ಯತ್ನಾಳ್ ಅವರಿಗೆ ಬಿಜೆಪಿಯವರು ಧನ್ಯವಾದ ತಿಳಿಸಬೇಕು ಎಂದರು.

ವಿಜಯೇಂದ್ರರಿಗೆ ಬಿಜೆಪಿ ಹೈಕಮಾಂಡ್ ಸಮನ್ಸ್ ನೀಡಿದೆಯಂತೆ. ಆದರೆ ವಿಜಯೇಂದ್ರಗೆ ವೈಯಕ್ತಿಕ ಸಲಹೆ ಕೊಡುತ್ತಿದ್ದೇನೆ. ವಿಜಯೇಂದ್ರ ದಯವಿಟ್ಟು ದೆಹಲಿಗೆ ಹೋಗಬೇಡಿ. ವಿಜಯೇಂದ್ರ ದೆಹಲಿಗೆ ಹೋದ್ರೇ ಬಿಜೆಪಿ ಹೈಕಮಾಂಡ್ ನಿಮ್ಮ ರಾಜೀನಾಮೆ ಕೇಳುತ್ತಾರೆ ಎಂದು ಲೇವಡಿ ಮಾಡಿದರು.‌

[pj-news-ticker]