Trending

ಬಿತ್ತನೆ ಬೀಜಕ್ಕೆ ಚಪ್ಪಲಿ ಸರತಿ : ಬಳ್ಳಾರಿಯಲ್ಲಿ ರೈತರ ಪರದಾಟ

Spread the love

ಬಳ್ಳಾರಿ : ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ಚಟುವಟಿಕೆಗಳು ಚುರುಕುಗೊಂಡಿರುವ ಬೆನ್ನಲ್ಲೇ ಬಿತ್ತನೆ ಬೀಜದ ಕೊರತೆ ಎದುರಾಗಿದ್ದು, ರೈತರು ಬೀಜ ಪಡೆಯಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ನಗರದ ಬಿತ್ತನೆ ಬೀಜ ಮಾರಾಟ ಕೇಂದ್ರಗಳ ಎದುರು ರೈತರು ತಮ್ಮ ಚಪ್ಪಲಿಗಳನ್ನು ಸರತಿಯಲ್ಲಿ ಇಟ್ಟು ಗಂಟೆಗಟ್ಟಲೆ ಕಾಯುವ ದೃಶ್ಯಗಳು ಕಂಡುಬಂದವು.

ಮುಂಜಾನೆಯಿಂದಲೇ ರೈತರು ಅಂಗಡಿಗಳ ಮುಂದೆ ಜಮಾಯಿಸಿದ್ದರು. ಕಚೇರಿ ಬಾಗಿಲು ತೆರೆಯುವ ಮುನ್ನವೇ ಸರತಿಯಲ್ಲಿ ಚಪ್ಪಲಿಗಳನ್ನು ಇಟ್ಟು ತಮ್ಮ ಸ್ಥಾನ ಕಾಯ್ದುಕೊಂಡು ಬೀಜಕ್ಕಾಗಿ ಕಾದರು. ಆದರೆ, ಇಷ್ಟಾದರೂ ಎಲ್ಲ ರೈತರಿಗೆ ಅಗತ್ಯ ಪ್ರಮಾಣದಲ್ಲಿ ಬೀಜ ದೊರೆಯುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.

ಜಿಲ್ಲೆಯಲ್ಲಿ ಹತ್ತಿ, ಮೆಣಸಿನಕಾಯಿ, ಜೋಳ ಹಾಗೂ ತೊಗರಿ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದು, ಮುಂಗಾರು ಆರಂಭವಾಗುತ್ತಿದ್ದಂತೆ ಬಿತ್ತನೆ ಬೀಜಗಳಿಗೆ ಬೇಡಿಕೆ ಹೆಚ್ಚಾಗಿದೆ. ಬೇಡಿಕೆಗೆ ಅನುಗುಣವಾಗಿ ಪೂರೈಕೆ ಆಗದಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದರ ನಡುವೆಯೇ ಬಿತ್ತನೆ ಬೀಜಗಳ ಬೆಲೆ ಏರಿಕೆಯೂ ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಬಾರಿ ತೊಗರಿ ಬಿತ್ತನೆ ಬೀಜದ ಬೆಲೆ ಪ್ರತಿ ಕೆ.ಜಿಗೆ ₹200ಕ್ಕೆ ತಲುಪಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ₹150 ಇತ್ತು ಎಂದು ರೈತರು ತಿಳಿಸಿದ್ದಾರೆ.

[pj-news-ticker]