Trending

ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿದ್ದ ನಕಲಿ ಟಿಟಿಇ ಬಂಧನ

Spread the love

ಮೈಸೂರು: ರೈಲಿನಲ್ಲಿ ಪ್ರಯಾಣಿಕರಿಂದ ಹಣ ಸಂಗ್ರಹಿಸಲು ಯತ್ನಿಸಿದ ನಕಲಿ ಟಿಟಿಇಯನ್ನು ಬಂಧಿಸಿದ ರೈಲ್ವೆ ಪೊಲೀಸರು, ಕಾನೂನು ಕ್ರಮಕ್ಕಾಗಿ ಸರ್ಕಾರಿ ರೈಲ್ವೆ ಪೊಲೀಸ್​ ಅಧಿಕಾರಿಗಳಿಗೆ (ಜಿಆರ್‌ಪಿ) ಒಪ್ಪಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ನಿವಾಸಿ ಎಂ.ಕೆ. ರಕೀಬುದ್ದೀನ್ (26) ಬಂಧಿತ ಆರೋಪಿ.

ಜೂನ್ 2ರಂದು ಸಂಜೆ 05:30ಕ್ಕೆ ಬೆಂಗಳೂರಿನ ಡೆಪ್ಯುಟಿ ಜೆ. ಯಶವಂತ್ ಅವರು ಅರಸೀಕೆರೆ ಜಿಆರ್‌ಪಿ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿದ್ದರು. ಜೂ.1ರಂದು ರೈಲು ಸಂಖ್ಯೆ 12089 ಕೆಎಸ್‌ಆರ್ ಬೆಂಗಳೂರು-ಶಿವಮೊಗ್ಗ ಟೌನ್ ಜನಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಟಿಕೆಟ್ ಪರಿಶೀಲನಾ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ, ಅರಸೀಕೆರೆ ನಿಲ್ದಾಣ ದಾಟಿದ ನಂತರ ಸಿ-1 ಕೋಚ್‌ನಲ್ಲಿ ಒಬ್ಬ ವ್ಯಕ್ತಿ ತಾನು ಟಿಟಿಇ ಎಂದು ಹೇಳಿಕೊಂಡಿರುವುದು ಗಮನಕ್ಕೆ ಬಂದಿದೆ.

ಪರಿಶೀಲನೆ ವೇಳೆ ಆತ ತನ್ನ ಮೊಬೈಲ್‌ನಲ್ಲಿ ನಕಲಿ ಗುರುತಿನ ಚೀಟಿಯನ್ನು ತೋರಿಸಿದ್ದಾನೆ. ವಿಚಾರಣೆ ವೇಳೆ ಶಿವಮೊಗ್ಗದವನು ಅಂತಾ ಹೇಳಿದ್ದಾನೆ.

ಹೆಚ್ಚಿನ ವಿಚಾರಣೆಯಲ್ಲಿ ಆತ ರೈಲ್ವೆ ನೌಕರನಲ್ಲ ಹಾಗೂ ಟಿಟಿಇ ಅಲ್ಲ ಎಂಬುದು ತಿಳಿದುಬಂದಿದ್ದು, ಪ್ರಯಾಣಿಕರಿಂದ ಹಣ ಸಂಗ್ರಹಿಸುವ ಉದ್ದೇಶದಿಂದ ಟಿಟಿಇ ವೇಷಧಾರಿಯಾಗಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ. ಬಳಿಕ ಕರ್ತವ್ಯದಲ್ಲಿದ್ದ ಟಿಟಿಇ ಅವರು ಆರೋಪಿಯನ್ನು ಅರಸೀಕೆರೆ ಠಾಣೆಗೆ ಒಪ್ಪಿಸಿ, ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

[pj-news-ticker]