Trending

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನೆಲ್ಲೇ ಬೆಂಗಳೂರಲ್ಲಿ ಸಿಎನ್​​ಜಿ ದರ 2 ರೂ ಹೆಚ್ಚಳ : ವಾಹನ ಸವಾರರು ಕಂಗಾಲು

Spread the love

ಬೆಂಗಳೂರು: ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರ ಬೆನ್ನೆಲ್ಲೇ ಬೆಂಗಳೂರಿನಲ್ಲಿ ಶನಿವಾರ ಸಿಎನ್​​ಜಿ ಬೆಲೆಯೂ ಏರಿಕೆಯಾಗಿದ್ದು, ವಾಹನ ಸವಾರರು ಕಂಗಾಲಾಗಿದ್ದಾರೆ.

ಇಂದು ಬೆಂಗಳೂರಿನಲ್ಲಿ CNG ದರ 2 ರೂಪಾಯಿ ಏರಿಕೆಯಾಗಿದ್ದು, ಕೆಜಿ ಸಿಎನ್​​ಜಿ 93 ರೂಪಾಯಿಯಿಂದ 95 ರೂಪಾಯಿಗೆ ಹೆಚ್ಚಳವಾಗಿದೆ. ಇದು ಕಳೆದ 9 ದಿನದಲ್ಲಿ ಮೂರನೇ ಬಾರಿ ಸಿಎನ್‌ಜಿ ಬೆಲೆ ಏರಿಕೆಯಾಗಿದೆ.

ಶಾಂತಿನಗರದ ಗೇಲ್ ಗ್ಯಾಸ್ ಮುಂಭಾಗದಲ್ಲಿ ಸಿಎನ್‌ಜಿಗಾಗಿ ಚಾಲಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಗಂಟೆಗಳ ಕಾಲ ಕಾದರೂ ಇಂಧನ ಸಿಗುವ ಯಾವುದೇ ಖಾತರಿಯಿಲ್ಲ. ಇದು ದೈನಂದಿನ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತಿದ್ದು, ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ ಎಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ.

ನಿರಂತರ ಬೆಲೆ ಏರಿಕೆ ಮತ್ತು ಇಂಧನ ಪೂರೈಕೆ ಸಮಸ್ಯೆಯಿಂದ ಬೆಂಗಳೂರಿನಲ್ಲಿ ಜೀವನ ನಡೆಸುವುದು ದುಸ್ತರವಾಗಿದೆ ಆಟೋ ಚಾಲಕರು ಹೇಳಿದ್ದಾರೆ.

[pj-news-ticker]