Trending

ಚಿಕ್ಕಮಗಳೂರಲ್ಲಿ ಕೈ-ಕಮಲ ಕಾರ್ಯಕರ್ತರ ನಡುವೆ ಘರ್ಷಣೆ, ಉದ್ವಿಗ್ನ ವಾತಾವರಣ

Spread the love

ಚಿಕ್ಕಮಗಳೂರು: ನಗರದ ಹೊರವಲಯದ ರಾಂಪುರ ಟು ಕೆ.ಆರ್​​. ಪೇಟೆ ರಸ್ತೆ ಕಾಮಗಾರಿ ವೀಕ್ಷಣೆಗೆ ಆಗಮಿಸಿದ್ದ ವಿಧಾನ ಪರಿಷತ್​​ ಸದಸ್ಯ ಸಿ.ಟಿ. ರವಿ ಅವರ ಭೇಟಿ ಹಿನ್ನೆಲೆ ನಗರದಲ್ಲಿ ರಾಜಕೀಯ ಉದ್ವಿಗ್ನತೆ ತಾರಕಕ್ಕೇರಿದ ಘಟನೆ ನಡೆದಿದೆ.

ಸಾಮಾನ್ಯವಾಗಿ ‘ಕೂಲ್ ಸಿಟಿ’ ಎಂದೇ ಹೆಸರಾಗಿರುವ ಕಾಫಿನಾಡು, ರಸ್ತೆ ಕಾಮಗಾರಿಯ ಕ್ರೆಡಿಟ್ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ತೀವ್ರ ವಾಗ್ವಾದ ಮತ್ತು ತಳ್ಳಾಟ – ಹೊಡೆದಾಟದಿಂದ ಕೆಲಕಾಲ ಕಾವೇರಿದ ರಾಜಕೀಯ ಅಖಾಡವಾಗಿ ಮಾರ್ಪಟ್ಟಿತು.

ರಾಂಪುರದಿಂದ ಕೆ.ಆರ್.ಪೇಟೆ ಮಾರ್ಗದ ರಸ್ತೆ ಕಾಮಗಾರಿ ವೀಕ್ಷಣೆಗೆ ತೆರಳಿದ್ದ ಸಿ.ಟಿ.ರವಿ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. ಇದರಿಂದ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಆರಂಭವಾಗಿ, ಬಳಿಕ ಅದು ತಳ್ಳಾಟ, ನೂಕಾಟ ಹಾಗೂ ಹೊಡೆದಾಟದ ಮಟ್ಟಕ್ಕೆ ತಲುಪಿತು. ಸ್ಥಳದಲ್ಲಿದ್ದ ನೂರಾರು ಪೊಲೀಸರ ಮಧ್ಯೆಯೇ ಕೈ ಹಾಗೂ ಕಮಲ ಪಾಳಯದ ಕಾರ್ಯಕರ್ತರು ಪರಸ್ಪರ ಎದುರಾಳಿ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.

ಘಟನೆ ವೇಳೆ ಕೆಲ ಕಾಂಗ್ರೆಸ್ ಕಾರ್ಯಕರ್ತರು ಸಿ.ಟಿ. ರವಿ ಅವರತ್ತ ಮುಗ್ಗರಿಸಿ ಹಲ್ಲೆಗೆ ಯತ್ನಿಸಿದರೆ, ಬಿಜೆಪಿ ಕಾರ್ಯಕರ್ತರು ಅವರನ್ನು ರಕ್ಷಿಸಲು ಮಾನವ ಗೋಡೆಯಂತೆ ನಿಂತರು. ಕೆಲ ಕ್ಷಣಗಳ ಕಾಲ ಪರಿಸ್ಥಿತಿ ನಿಯಂತ್ರಣ ತಪ್ಪಿದಂತಾಗಿದ್ದು, ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಹರ ಸಾಹಸ ಪಟ್ಟರು. ಆರಂಭದಲ್ಲಿ ಪೊಲೀಸರು ಕೂಡ ಅಸಹಾಯಕರಾಗಿ ಕಾಣಿಸಿಕೊಂಡ ದೃಶ್ಯಗಳು ಗಮನ ಸೆಳೆದವು.

[pj-news-ticker]