Trending

ಬೀದರ್‌ನಲ್ಲಿ ಬಿಸಿಲಿನ ಝಳಕ್ಕೆ ಯುವಕ ಬಲಿ

Spread the love

ಬೀದರ್ : ರಾಜ್ಯದಲ್ಲಿ ಹೀಟ್‌ ವೇವ್ ಜೋರಾಗಿದ್ದು, ಬೀದರ್‌ನಿಂದ ಆತಂಕದ ಸುದ್ದಿ ಬಂದಿದೆ. ತರಕಾರಿ ತರಲು ಹೋಗಿ ಯುವಕ ಸಾವನ್ನಪ್ಪಿದ್ದು, ಬಿಸಿಲಿನ ಝಳಕ್ಕೆ ಮಗ ಬಲಿಯಾಗಿದ್ದಾನೆಂದು ತಂದೆ ಗೋಳಾಡಿದ್ದಾರೆ.

ಈ ಘಟನೆ ಬೀದರ್  ಜಿಲ್ಲೆಯ ಕಮಲನಗರ ಪಟ್ಟಣದ ಡಿಗ್ಗಿ ರೋಡ್ ಬಳಿ ನಡೆದಿದೆ. ಯುಪಿ ಮೂಲದ ಮೊಹ್ಮದ್ ಸಮೀರ್ ಅಹ್ಮದ್ (20) ಸಾವನ್ನಪ್ಪಿದ ದುರ್ದೈವಿ ಯುವಕ. ಗರಿಷ್ಠ ತಾಪಮಾನ ಸಹಿಸಲಾರದೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಘಟನೆ ನಡೆದ ದಿನ ಯುವಕ ತರಕಾರಿ ತರಲು ಹೋಗಿದ್ದ. ಬಳಿಕ ಮನೆಗೆ ವಾಪಸ್ಸಾಗುವಾಗ ತಲೆ ತಿರುಗಿದಂತಾಗಿದ್ದು, ಕೂಡಲೇ ಸಮೀಪದಲ್ಲಿಯೇ ಇದ್ದ ಮೆಕಾನಿಕ್ ಅಂಗಡಿಯಲ್ಲಿ ನೀರು ಕುಡಿದು ವಿಶ್ರಾಂತಿ ಪಡೆದಿದ್ದ. ಸ್ವಲ್ಪ ಹೊತ್ತಾದ ಮೇಲೆ ಮನೆಗೆ ಮರಳುವಾಗ ಡಿಗ್ಗಿ ಗ್ರಾಮದ ರಸ್ತೆ ಬಳಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.

ಬಿಸಿಲಿನಿಂದಲೇ ಮಗ ಸಾವನ್ನಪ್ಪಿದ್ದಾನೆ ಎಂದು ತಂದೆ ಲಯಿಕ್ ಅಹ್ಮದ್ ದೂರು ನೀಡಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಮಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದೇ ವೇಳೆಗೆ ಬಿಸಿಲು ಅತ್ಯಧಿಕವಾಗಿರುವ ಹೊತ್ತಿನಲ್ಲಿ ಹೊರಗೆ ಹೋಗದಂತೆ, ಹೋಗಲೇಬೇಕಾದ ಪರಿಸ್ಥಿತಿಯಲ್ಲಿ ತಲೆ ಹಾಗೂ ಮುಖವನ್ನು ಬಟ್ಟೆಯಿಂದ ಕವರ್‌ ಮಾಡಿಕೊಳ್ಳುವಂತೆ, ಹಾಗೂ ಸಾಕಷ್ಟು ನೀರು ಸೇವಿಸಿ ಹೈಡ್ರೇಟ್‌ ಆಗಿರುವಂತೆ ತಜ್ಞರು ಸೂಚಿಸಿದ್ದಾರೆ.

[pj-news-ticker]