Trending

ರಿಪ್ಪನ್ ಪೇಟೆ : ಯುವ ಕಬಡ್ಡಿ ಆಟಗಾರನ ದುರಂತ ಅಂತ್ಯ

Spread the love

ರಿಪ್ಪನ್ ಪೇಟೆ : ಸಮೀಪದ ಕೊಳವಳ್ಳಿ ಗ್ರಾಮದಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಕಿಗೆ ಬಂದಿದೆ.

ಮೃತನನ್ನು ಸುನೀಲ್ ಬಿನ್ ವೀರಭದ್ರ (23) ಎಂದು ಗುರುತಿಸಲಾಗಿದೆ. ಬುಧವಾರ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ ಸುನೀಲ್, ಬಳಿಕ ಸ್ನೇಹಿತನ ಮನೆಗೆ ಹೋಗುವುದಾಗಿ ಹೇಳಿ ಹೊರಟಿದ್ದನು. ರಾತ್ರಿ ತಡವಾಗಿ ಮನೆಗೆ ವಾಪಸ್ಸಾಗಿದ್ದ ವೇಳೆ ಮದ್ಯಪಾನ ಮಾಡಿದ್ದಾನೆಂದು ತಿಳಿದು ಬಂದಿದೆ.

ಮನೆಗೆ ಬಂದ ನಂತರ ತಂದೆ-ತಾಯಿಯೊಂದಿಗೆ ಮಾತನಾಡಿ, ಮನೆಯ ಹೊರಭಾಗದಲ್ಲಿ ಕೆಲಕಾಲ ಕಾಲ ಕಳೆಯುತ್ತಿದ್ದನು. ಬಳಿಕ ಮನೆಯೊಳಗೆ ತೆರಳಿದ್ದ ಸುನೀಲ್, ರಾತ್ರಿ ಸುಮಾರು 11.30ರ ವೇಳೆಗೆ ಮನೆಯ ಹಾಲ್‌ನಲ್ಲಿ ಕಬ್ಬಿಣದ ರಾಡಿಗೆ ನೈಲಾನ್ ಬೆಡ್‌ಶೀಟ್ ಬಳಸಿ ನೇಣು ಬಿಗಿದುಕೊಂಡಿರುವುದು ಕುಟುಂಬ ಸದಸ್ಯರಿಗೆ ಗೋಚರಿಸಿದೆ.

ತಕ್ಷಣವೇ ಕುಟುಂಬಸ್ಥರು ಮತ್ತು ನೆರೆಹೊರೆಯವರ ಸಹಾಯದಿಂದ ರಿಪ್ಪನ್ ಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಪರಿಶೀಲಿಸಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ಕುಟುಂಬದವರ ಪ್ರಕಾರ, ಸುನೀಲ್ ಹೆಚ್ಚು ಮದ್ಯಪಾನ ಮಾಡುತ್ತಿದ್ದುದರಿಂದ ಮಾನಸಿಕವಾಗಿ ಅಸ್ವಸ್ಥನಾಗಿದ್ದನು ಎಂದು ಹೇಳಲಾಗಿದೆ. ಆತ ಒಬ್ಬ ಉತ್ತಮ ಕಬಡ್ಡಿ ಕ್ರೀಡಾಪಟುವಾಗಿದ್ದನೆಂಬ ಮಾಹಿತಿ ಕೂಡ ಲಭ್ಯವಾಗಿದೆ.

[pj-news-ticker]