Trending

ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕಲೇಟ್‌ ಕೊಟ್ಟು ಪ್ರಪೋಸ್‌ ಮಾಡಿದ ಪ್ರೊಫೆಸರ್‌, ಚಪ್ಪಲಿ ಏಟು

Spread the love

ನೆಲಮಂಗಲ: ಪ್ರತಿಷ್ಠಿತ ಕಾಲೇಜಿನ ಪ್ರೊಫೆಸರ್‌ ಒಬ್ಬ  ಕ್ಲಾಸ್‌ ರೂಮಿನಲ್ಲೇ ವಿದ್ಯಾರ್ಥಿನಿಗೆ ಪ್ರಪೋಸ್‌ ಮಾಡಿ ಹಾಗೂ ಬಳಿಕ ಏಟು ತಿಂದ ಘಟನೆ ನೆಲಮಂಗಲ  ತಾಲೂಕಿನ ಮೆಡಿಕಲ್ ಕಾಲೇಜಿನಲ್ಲಿ  ನಡೆದಿದೆ.

ನಾಚಿಕೆ, ಮಾನ, ಮರ್ಯಾದೆ ಎಲ್ಲವನ್ನೂ ಬದಿಗಿಟ್ಟು ಈತ ಎಸಗಿದ ಕೃತ್ಯ ವಿದ್ಯಾರ್ಥಿಗಳಿಗೆ ನಗು ಹಾಗೂ ಸಿಟ್ಟನ್ನು ಏಕಕಾಲದಲ್ಲಿ ತರಿಸಿದೆ.

ತರಗತಿ ನಡೆಯುತ್ತಿದ್ದಾಗಲೇ ವಿದ್ಯಾರ್ಥಿನಿಗೆ  ಚಾಕೊಲೇಟ್ ಕೊಟ್ಟು ಪ್ರೊಫೆಸರ್‌ ಅಬ್ದುಲ್‌ ಪ್ರಪೋಸ್‌ ಮಾಡಿದ್ದಾನೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿನಿ ತರಗತಿಯಲ್ಲೇ ಪ್ರಶ್ನೆ ಮಾಡಿದ್ದಾರೆ. ಬಳಿಕ ಪ್ರೊಫೆಸರ್‌ಗೆ ಚಪ್ಪಲಿಯಿಂದ ಥಳಿಸಿದ್ದಾರೆ.

ಅಲ್ಲದೇ ಪ್ರೊಫೆಸರ್‌ ಅಬ್ದುಲ್‌ ವರ್ತನೆಯಿಂದ ರೊಚ್ಚಿಗೆದ್ದ ಇತರ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲೇ ಅಟ್ಟಾಡಿಸಿ ಹೊಡೆದಿದ್ದಾರೆ. ಕಾರಿನ ಬಳಿ ಬಂದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರಿಂದ ಕಂಗಾಲಾದ ಅಬ್ದುಲ್‌ ಹೇಗೋ ವಿದ್ಯಾರ್ಥಿಗಳಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ  ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

[pj-news-ticker]