ಶಿವಮೊಗ್ಗ: ಕಲಘಟಗಿ, ಚಾಮರಾಜನಗರ, ಹಾಸನದ ಬಳಿಕ ಶಿವಮೊಗ್ಗ ನಗರದಲ್ಲೂ ಬುಧವಾರ ಸಂಜೆ ಆಲಿಕಲ್ಲು ಮಳೆ ಸುರಿದಿದ್ದು ಜನರಿಗೆ ಅಚ್ಚರಿ ಮೂಡಿಸಿದೆ.
ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಮಳೆಯ ಲಕ್ಷಣಗಳು ಕಾಣಿಸುತ್ತಿದ್ದವು. ಸಂಜೆ ಸುಮಾರು 4.45ರ ವೇಳೆಗೆ ಏಕಾಏಕಿ ಆಲಿಕಲ್ಲು ಮಳೆ ಆರಂಭವಾಗಿ ಕೆಲ ಕಾಲ ಭಾರೀ ಮಳೆಯೊಂದಿಗೆ ಸುರಿಯಿತು.
ಅಕಸ್ಮಾತ್ ಸುರಿದ ಆಲಿಕಲ್ಲು ಮಳೆಯಿಂದ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದು, ರಸ್ತೆಗಳಲ್ಲಿ ವಾಹನ ಚಲಾವಣೆ ಕಷ್ಟಕರವಾಗಿತ್ತು. ಕೆಲವೆಡೆ ಜನರು ಮಳೆಯಿಂದ ತಪ್ಪಿಸಿಕೊಳ್ಳಲು ಅಂಗಡಿಗಳ ಆಶ್ರಯ ಪಡೆದರು.
