Trending

ಶಿವಮೊಗ್ಗ: ಜಮೀನು ಜಗಳದ ಕ್ರೂರ ಅಂತ್ಯ : ಜೀವಂತವಾಗಿ ಸುಟ್ಟು ಕೊಲೆ – ತಂದೆ-ಮಗನಿಗೆ ಜೀವಾವಧಿ ಶಿಕ್ಷೆ

Spread the love

ಶಿವಮೊಗ್ಗ: ಜಮೀನು ವಿವಾದದಿಂದ ಉಂಟಾದ ವೈಷಮ್ಯ ಕೊನೆಗೆ ಕ್ರೂರ ಹತ್ಯೆಯಾಗಿ ಮಾರ್ಪಟ್ಟ ಘಟನೆಗೆ ನ್ಯಾಯಾಲಯ ಕಠಿಣ ತೀರ್ಪು ನೀಡಿದೆ. ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೈದ ಪ್ರಕರಣದಲ್ಲಿ ಆರೋಪಿಗಳಾದ ಕುಮಾರ್ (57) ಹಾಗೂ ಪುತ್ರ ಕಾರ್ತಿಕ್ (28) ಅವರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ₹57 ಸಾವಿರ ದಂಡ ವಿಧಿಸಲಾಗಿದೆ.

2023ರಲ್ಲಿ ಶಿವಮೊಗ್ಗ ತಾಲೂಕಿನ ಬೆಳಲಕಟ್ಟೆ ಗ್ರಾಮದಲ್ಲಿ ಈ ಭೀಕರ ಘಟನೆ ನಡೆದಿತ್ತು. ಮೃತ ಮಹೇಶಪ್ಪ ಹಾಗೂ ಆರೋಪಿಗಳ ನಡುವೆ ಜಮೀನು ವಿಚಾರವಾಗಿ ನಿರಂತರ ಜಗಳಗಳು ನಡೆಯುತ್ತಿದ್ದು, ಅದೇ ದ್ವೇಷ ಕೊಲೆಗೇ ಕಾರಣವಾಯಿತು.

ಯೋಜಿತವಾಗಿ ಹನಸವಾಡಿ ಸರ್ಕಲ್ ಬಳಿ ಹೊಂಚು ಹಾಕಿ ಕಾದಿದ್ದ ಆರೋಪಿಗಳು, ಮಹೇಶಪ್ಪ ಬೈಕ್‌ನಲ್ಲಿ ಬರುವಾಗ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅಮಾನವೀಯವಾಗಿ ಹತ್ಯೆಗೈದಿದ್ದರು. ಪ್ರಕರಣ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ತನಿಖೆ ನಡೆಸಿದ ಸತ್ಯನಾರಾಯಣ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಅಭಯ್ ಧನಪಾಲ್ ಚೌಗಲ ಅವರು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಮಾನಿಸಿದರು.

ಸರ್ಕಾರದ ಪರವಾಗಿ ವಾದ ಮಂಡಿಸಿದ ಮಮತ ಪ್ರಕರಣದ ಗಂಭೀರತೆಯನ್ನು ಒತ್ತಿಹೇಳಿದರು. ಅಂತಿಮವಾಗಿ ನ್ಯಾಯಾಲಯ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

[pj-news-ticker]