Trending

ಶಿವಮೊಗ್ಗ – ಚಲಿಸುತ್ತಿದ್ದ ರೈಲಿನಲ್ಲಿ ಬೆದರಿಸಿ ಮೊಬೈಲ್ ದರೋಡೆ : ಇಬ್ಬರ ಬಂಧನ

Spread the love

ಶಿವಮೊಗ್ಗ: ಚಲಿಸುತ್ತಿದ್ದ ರೈಲಿನಲ್ಲಿ ಚಾಕು ತೋರಿಸಿ ಬೆದರಿಸಿ, ಮೊಬೈಲ್ ದರೋಡ ಮಾಡಿದ್ದ ಇಬ್ಬರನ್ನು ಆರ್ ಪಿ ಎಫ್ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಫೆಬ್ರುವರಿ 11ರ ರಾತ್ರಿ ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಸಾಗರ – ಯಶವಂತಪುರ ರೈಲಿನಲ್ಲಿ ಹೊರಟಿದ್ದ ವ್ಯಕ್ತಿಯೂರ್ವರನ್ನು ರೈಲಿನಲ್ಲಿಯೇ ಚಾಕು ತೋರಿಸಿ ಬೆದರಿಸಿ, ಅವರ ಬಳಿ ಇದ್ದ ಮೊಟರಾಲೋ ಕಂಪನಿಯ ಮೊಬೈಲ್ ಅನ್ನು ಕಸಿದುಕೊಂಡು ಪರಾರಿಯಾಗಿದ್ದರು‌. ಈ ಕುರಿತು ಮೊಬೈಲ್ ಕಳೆದುಕೊಂಡಿದ್ದ ವ್ಯಕ್ತಿ ಆನ್​ಲೈನ್​ನಲ್ಲಿ ದೂರು ದಾಖಲಿಸಿದ್ದರು‌.

ಈ ದೂರಿನ ಅನ್ವಯ ಆರ್ ಪಿ ಎಫ್‌ ಪೊಲೀಸರು ತನಿಖೆ ಪ್ರಾರಂಭಿಸಿ, ಶಿವಮೊಗ್ಗದ ರಾಜೀವ್ ಗಾಂಧಿ ಬಡಾವಣೆ ನಿವಾಸಿ ಪರಶುರಾಮ್ ಅಲಿಯಾಸ್ ಚಿಂಗಾರಿ (29) ಹಾಗೂ ಪರಾರಿಯಾಗಿದ್ದ ಇನ್ನೋರ್ವ ಆರೋಪಿ ಮೊಹಮ್ಮದ್ ಹುಸೇನ್ ಎಂಬುರನ್ನು ಸಹ ಬಂಧಿಸಿದ್ದಾರೆ. ಬಂಧಿತರಿಂದ ಮೊಬೈಲ್ ವಶಕ್ಕೆ ಪಡೆದಿದ್ದಾರೆ.

ಕಾರ್ಯಾಚರಣೆಯಲ್ಲಿ ಪೋಸ್ಟ್ ಕಮಾಂಡರ್/ಆರ್‌ಪಿಎಫ್/ಶಿವಮೊಗ್ಗ, ಮತ್ತು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ), ಪ್ರಕಾಶ್ ಹಾಗೂ ಇನ್ಸ್ ಪೆಕ್ಟರ್ ಮಹೇಶ್, ಸಬ್-ಇನ್ಸ್‌ಪೆಕ್ಟರ್ ಭಾಗಿಯಾಗಿದ್ದರು.

[pj-news-ticker]