Trending

ಕೇಂದ್ರ ಬಜೆಟ್ : ಯಾವುದೆಲ್ಲ ಅಗ್ಗ, ಏನೆಲ್ಲ ದುಬಾರಿ?

Spread the love

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿ, ಆತ್ಮ ನಿರ್ಭರ ಭಾರತಕ್ಕೆ ಆದ್ಯತೆ ನೀಡಿದ್ದಾರೆ. ಬಜೆಟ್​​ನ ಪ್ರಮುಖ ಅಂಶಗಳಲ್ಲಿ​ ಆರ್ಥಿಕತೆಗೆ ಉತ್ತೇಜನ ನೀಡಲು ಕೆಲ ವಸ್ತುಗಳು ಅಗ್ಗವಾದರೆ, ಇನ್ನೂ ಕೆಲವು ದುಬಾರಿಯಾಗಲಿವೆ.

ಸರ್ಕಾರವು ಕೆಲ ವಸ್ತುಗಳ ಮೇಲಿನ ತೆರಿಗೆ ಮತ್ತು ಕಸ್ಟಮ್ಸ್ ಸುಂಕ ಕಡಿತಗೊಳಿಸಿರುವುದರಿಂದ ಆ ವಸ್ತುಗಳು ಅಗ್ಗವಾಗಲಿವೆ. ಅಗತ್ಯ ಔಷಧಗಳು, ಎಲೆಕ್ಟ್ರಿಕ್ ವಾಹನಗಳು ಮತ್ತು ಚರ್ಮದ ಉತ್ಪನ್ನಗಳಂತಹ ವಸ್ತುಗಳ ಮೇಲಿನ ಸುಂಕ ಮತ್ತು ಕಸ್ಟಮ್ಸ್ ಸುಂಕ ಕಡಿತಗೊಳಿಸಿದ್ದರಿಂದ, ಇವುಗಳು ಅಗ್ಗವಾಗಲಿವೆ. ಮತ್ತೊಂದೆಡೆ, ಕೈಗಡಿಯಾರ ಮತ್ತು ಆಲ್ಕೋಹಾಲ್​ ಸೇರಿದಂತೆ ಐಷಾರಾಮಿ ಸರಕುಗಳ ಮೇಲಿನ ಹೆಚ್ಚಿನ ತೆರಿಗೆಯಿಂದ ಇವು ದುಬಾರಿಯಾಗಲಿವೆ.

ಯಾವುದೆಲ್ಲ ಇಳಿಕೆ?: ಮೈಕ್ರೋವೇವ್ ಪರಿಕರಗಳು, ಅಗತ್ಯ ಔಷಧಗಳು ಮತ್ತು ಕೆಲ ಆಮದು ಸರಕುಗಳು ಕ ಅಗ್ಗವಾಗಲಿವೆ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದರು.

  • ಈ ಬಜೆಟ್​​ ನಲ್ಲಿ ಸುಂಕ ಕಡಿತಗೊಳಿಸಿದ್ದರಿಂದ ಮೈಕ್ರೋವೇವ್ ಓವನ್‌ಗಳು, ಇವಿ ಬ್ಯಾಟರಿಗಳು, ಸೌರ ಫಲಕಗಳು ಮತ್ತು ವಿಮಾನದ ಬಿಡಿ ಭಾಗಗಳು ಅಗ್ಗವಾಗಲಿವೆ.
  • ಮಧುಮೇಹ ಮತ್ತು ಕ್ಯಾನ್ಸರ್ ರೋಗಗಳ ಔಷಧಗಳು ಸೇರಿದಂತೆ 17 ಔಷಧಗಳ ದರ ಸಹ ಕಡಿಮೆಯಾಗಲಿದೆ.
  • ಅಲ್ಲದೇ, ಭಾರತದಲ್ಲಿ ತಯಾರಾದ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳು ಹಾಗೂ ಟಿವಿ ಸಹ ಅಗ್ಗವಾಗಲಿವೆ.
  • ವೈಯಕ್ತಿಕ ಬಳಕೆಗಾಗಿ ಉದ್ದೇಶಿಸಲಾದ ಕೆಲವು ಆಮದು ಮಾಡಿಕೊಳ್ಳುವ ವಸ್ತುಗಳ ಬೆಲೆಗಳು ಸಹ ಇಳಿಕೆಯಾಗಲಿದೆ.
  • ವಿದೇಶಿ ಪ್ರವಾಸ, ವಿದೇಶಿ ಶಿಕ್ಷಣ ಅಗ್ಗವಾಗಲಿದೆ.
  • ಬಜೆಟ್​ ನಲ್ಲಿ ಚರ್ಮದ ಆಮದು ಸುಂಕ ಇಳಿಕೆ ಮಾಡಲಾಗಿದೆ. ಪರಿಣಾಮ ಪಾದರಕ್ಷೆ ಸೇರಿ ಚರ್ಮದ ಉತ್ಪನ್ನಗಳು ಅಗ್ಗವಾಗಲಿವೆ. ಜೊತೆಗೆ ಚರ್ಮ ರಫ್ತುದಾರರಿಗೆ ಉತ್ತೇಜನ ಸಿಗಲಿದೆ.

ಯಾವೆಲ್ಲ ದುಬಾರಿ? :

  • ತಂಬಾಕು ಉತ್ಪನ್ನಗಳು (ಸಿಗರೇಟ್, ಪಾನ್ ಮಸಾಲಾ)
  • ಆಮದು ಮಾಡಿಕೊಳ್ಳುವ ಮದ್ಯ
  • ಐಷಾರಾಮಿ ಕೈಗಡಿಯಾರಗಳು
  • ರಸಗೊಬ್ಬರ
  • ಕಲ್ಲಿದ್ದಲು
  • ಕಾಫಿ ಹುರಿಯುವುದು, ಬ್ರೂಯಿಂಗ್ ಮತ್ತು ವೆಂಡಿಂಗ್ ಮೆಷಿನ್‌ಗಳ ಮೇಲಿನ ವಿನಾಯಿತಿ ಕಡಿತದಿಂದ, ಇವು ದುಬಾರಿಯಾಗಲಿವೆ
  • ಅಮೋನಿಯಂ ಫಾಸ್ಫೇಟ್ ಅಥವಾ ಅಮೋನಿಯಂ ನೈಟ್ರೋ-ಫಾಸ್ಫೇಟ್ ಮೇಲಿನ ಆಮದು ಶುಲ್ಕ ವಿನಾಯಿತಿ ಕಡಿತದಿಂದ ಕೆಲವು ರಸಗೊಬ್ಬರಗಳ ಬೆಲೆ ಏರಿಕೆ
  • ಆಮದು ಎಲೆಕ್ಟ್ರಾನಿಕ್ಸ್, ಟಿವಿ ಪರಿಕರಗಳು, ಕ್ಯಾಮೆರಾಗಳು ಮತ್ತು ಚಲನಚಿತ್ರ ಚಿತ್ರೀಕರಣಕ್ಕಾಗಿ ಬಳಸುವ ಉಪಕರಣಗಳು ಸಹ ದುಬಾರಿ ಆಗಲಿವೆ.
[pj-news-ticker]