ತೀರ್ಥಹಳ್ಳಿ : ಗುರುವಾರ ಮಧ್ಯಾಹ್ನದಿಂದ ಕಾಣೆಯಾಗಿದ್ದ ವ್ಯಕ್ತಿಯ ಶವ ಹುಣಸವಳ್ಳಿ ಸಮೀಪದ ತುಂಗಾ ನದಿಯಲ್ಲಿ ಪತ್ತೆಯಾಗಿದೆ.
ವಸಂತ (31 ವರ್ಷ) ಸಾವನ್ನಪ್ಪಿದ ವ್ಯಕ್ತಿ. ಗುರುವಾರ ಮಧ್ಯಾಹ್ನ ಮನೆಯಿಂದ ತೋಟಕ್ಕೆ ಎಂದು ಮನೆಯಿಂದ ಹೇಳಿ ಹೋಗಿದ್ದವನು ಪುನಃ ಮನೆಗೆ ವಾಪಾಸ್ ಆಗಿರಲಿಲ್ಲ. ಆದರೆ ಇಂದು ಶುಕ್ರವಾರ ಹುಣಸವಳ್ಳಿ ಸಮೀಪದ ಭೂ ವರಹ ದೇವಸ್ಥಾನದ ಹತ್ತಿರ ನದಿ ತೀರದಲ್ಲಿ ಚಪ್ಪಲಿ ಇರುವುದು ಕಂಡು ಬಂದಿದ್ದು ಅಗ್ನಿಶಾಮಕ ದಳದ ಸಿಬ್ಬಂದಿಗಳು ನದಿಯಲ್ಲಿ ತೀವ್ರ ಹುಡುಕಾಟ ನಡೆಸಿದಾಗ ಈತನ ಶವ ಪತ್ತೆಯಾಗಿದೆ.
ಸಾವಿಗೆ ಕಾರಣ ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.
