Trending

2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಿಂದ ಬಾಂಗ್ಲಾದೇಶ ಔಟ್‌? ಬಾಂಗ್ಲಾ ಸ್ಥಾನಕ್ಕೆ ಸ್ಕಾಟ್ಲೆಂಡ್!

Spread the love

ಢಾಕಾ: ಮುಂದಿನ ಟಿ20ಐ ವಿಶ್ವಕಪ್‌ ಟೂರ್ನಿಯ ತಮ್ಮ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಕ್ಕೆ ಸ್ಥಳಾಂತರಿಸಬೇಕೆಂಬ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಯ ಮನವಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌  ತಿರಸ್ಕರಿಸಿದೆ. ಹಾಗಾಗಿ ಬಾಂಗ್ಲಾದೇಶ ಚುಟುಕು ವಿಶ್ವಕಪ್‌ ಟೂರ್ನಿಯನ್ನು ಬಹಿಷ್ಕರಿಸಲು ನಿರ್ಧರಿಸಿದೆ.

ಅಂದ ಹಾಗೆ ಬಾಂಗ್ಲಾದೇಶ ತನ್ನ ನಾಲ್ಕು ಲೀಗ್‌ ಪಂದ್ಯಗಳನ್ನು ಭಾರತದಲ್ಲಿ ಆಡಬೇಕಾಗಿತ್ತು. ಮೂರು ಪಂದ್ಯಗಳನ್ನು ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಹಾಗೂ ಒಂದು ಪಂದ್ಯವನ್ನು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಡಬೇಕಿತ್ತು. ಆದರೆ, ರಾಜಕೀಯ ಕಾರಣಗಳಿಂದಾಗಿ ಬಾಂಗ್ಲಾದೇಶ ತಂಡ ಭಾರತದಲ್ಲಿ ಟಿ20 ವಿಶ್ವಕಪ್‌ ಟೂರ್ನಿಯನ್ನು ಆಡಲು ನಿರಾಕರಿಸಿದೆ.

ಜನವರಿ 21 ರಂದು ಐಸಿಸಿ ತನ್ನ ಸದಸ್ಯ ರಾಷ್ಟ್ರಗಳೊಂದಿಗೆ ಸಭೆಯನ್ನು ನಡೆಸಿತ್ತು. ಈ ವೇಳೆ ಬಾಂಗ್ಲಾದೇಶ ತಂಡದ ಮನವಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿತ್ತು. ಈ ವೇಳೆ ಬಾಂಗ್ಲಾ ಪಂದ್ಯಗಳನ್ನು ಶ್ರೀಲಂಕಕ್ಕೆ ಸ್ಥಳಾಂತರಿಸುವ ಮನವಿಯನ್ನು ತಿರಸ್ಕರಿಸಿತು.

ಒಂದು ವೇಳೆ ಬಾಂಗ್ಲಾದೇಶ ತಂಡ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯನ್ನು ತಿರಸ್ಕರಿಸಿದರೆ, ಬಾಂಗ್ಲಾ ತಂಡದ ಸ್ಥಾನಕ್ಕೆ ಬೇರೆ ತಂಡವನ್ನು ಪರಿಗಣಿಸಬಹುದು. ಈ ರೇಸ್‌ನಲ್ಲಿ ಸ್ಕಾಟ್ಕೆಂಡ್‌ ಮುಂಚೂಣಿಯಲ್ಲಿದೆ. ಟಿ20 ವಿಶ್ವಕಪ್‌ ಟೂರ್ನಿಯು ಫೆಬ್ರವರಿ 7 ರಿಂದ ಮಾರ್ಚ್‌ 8ರವರೆಗೆ ನಡೆಯಲಿದೆ.

[pj-news-ticker]