Trending

5 ರೂ. `ಚಿಪ್ಸ್’ ಪ್ಯಾಕೆಟ್ ನಲ್ಲಿ ಸಿಕ್ಕಿದ ಆಟಿಕೆ ಸ್ಫೋಟ : ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ಬಾಲಕ

Spread the love

ಒಡಿಶಾ: ಪೋಷಕರು ಮಕ್ಕಳಿಗೆ ಹಠ ಮಾಡುತ್ತಾರೆ ಎನ್ನುವ ಕಾರಣಕ್ಕೆ ಅಂಗಡಿಗಳಲ್ಲಿ ಸಿಗುವ ಕುರುಕಲು ತಿಂಡಿ – ತಿನಸುಗಳನ್ನು ಖರೀದಿಸಿ ಕೊಡುತ್ತಾರೆ. ಮಕ್ಕಳಿಗೆ ತಮ್ಮ ಬ್ರ್ಯಾಂಡ್‌ ಸೆಳೆಯಲಿ ಎನ್ನುವ ಕಾರಣಕ್ಕೆ ಕೆಲ ಕಂಪನಿಗಳು ತಿನಿಸಿನ ಪ್ಯಾಕೆಟ್‌ನೊಳಗೆ ಟಾಯ್ಸ್‌ಗಳನ್ನು ಇಡುತ್ತಾರೆ.

ಸಾಮಾನ್ಯವಾಗಿ ಮಕ್ಕಳು ಕೂಡ ಟಾಯ್ಸ್‌ ಸಿಗುವ ಆಸೆಯಿಂದ ಅದೇ ಕುರುಕಲು ಅಥವಾ ಚಾಕ್ಲೇಟ್‌ ಪ್ಯಾಕೆಟ್‌ಗಳನ್ನು ಖರೀದಿಸಿ ಕೊಡುವಂತೆ ಹಠ ಮಾಡುತ್ತಾರೆ.

ಕುರುಕಲು ತಿನಿಸಿನಲ್ಲಿ ಸಿಕ್ಕ ಆಟಿಕೆವೊಂದು ಸಿಡಿದ ಪರಿಣಾಮ ಬಾಲಕನೊಬ್ಬ ಒಂದು ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿರುವ ಘಟನೆ ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.

ಬಾಲಕನೊಬ್ಬ ಸ್ಥಳೀಯ ಅಂಗಡಿಯಿಂದ ಐದು ರೂಪಾಯಿಗೆ ಸಿಗುವ ಬೆಲೆಯ ‘ಲೈಟ್ ಹೌಸ್’ ಕಾರ್ನ್ ಪಫ್‌ಗಳ ಪ್ಯಾಕೆಟ್ ಖರೀದಿಸಿದ್ದ. ಈ ತಿಂಡಿಯ ಪ್ಯಾಕೆಟ್‌ನಲ್ಲಿ ಬಾಲಕನಿಗೆ ಟಾಯ್‌ ಸಿಕ್ಕಿದೆ. ತಿಂಡಿ ತಿಂದ ಬಳಿಕ ಟಾಯ್‌ ಅಲ್ಲಿ ಆಡುತ್ತಿದ್ದ. ಇದೇ ವೇಳೆ ಇದ್ದಕ್ಕಿದ್ದಂತೆ ಟಾಯ್‌ ಸ್ಪೋಟಗೊಂಡಿದೆ. ಪರಿಣಾಮ ಕಣ್ಣಿಗೆ ತೀವ್ರತರದ ಹಾನಿಯಾಗಿದೆ.

ಆಸ್ಪತ್ರೆಗೆ ದಾಖಲು ಮಾಡಿ ವೈದ್ಯರು ಪರೀಕ್ಷಿಸಿದ್ದು, ಒಂದು ಕಣ್ಣಿನ ದೃಷ್ಟಿ ಶಾಶ್ವತವನ್ನು ಹೋಯಿತು ಎಂದು ವೈದ್ಯರು ಹೇಳಿದ್ದಾರೆ.

ಬರೀ 5 ರೂಪಾಯಿಗೆ ಸಿಕ್ಕ ಕುರುಕಲು ತಿನಿಸಿನಿಂದಾಗಿ ಬಾಲಕ ಶಾಶ್ವತವಾಗಿ ಒಂದು ಕಣ್ಣನ್ನು ಕಳೆದುಕೊಂಡಿದ್ದು, ಪೋಷಕರು, ಸ್ಥಳೀಯರನ್ನು ಆಘಾತಗೊಳಿಸಿದೆ.

ಈ ಸಂಬಂಧ ಬಾಲಕನ ಪೋಷಕರು ಪೊಲೀಸರಿಗೆ ದೂರು ನೀಡಿ ಉತ್ಪನ್ನವನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ.

ತಯಾರಿಕಾ ಕಂಪನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಗಾಯಗೊಂಡ ತಮ್ಮ ಮಗುವಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

[pj-news-ticker]