Trending

ಕಾಲ್ತುಳಿತ ದುರಂತದ ನೆಪದಲ್ಲಿ ಕ್ರಿಕೆಟ್ ಪಂದ್ಯಾವಳಿ ನಿಲ್ಲಿಸುವುದು ಪರಿಹಾರವಲ್ಲ: ಅನಿಲ್ ಕುಂಬ್ಳೆ

Spread the love

ಬೆಂಗಳೂರು: ಕಾಲ್ತುಳಿತ ದುರಂತ ಆಗಿದೆ ಎಂಬ ಕಾರಣಕ್ಕೆ ಕ್ರಿಕೆಟ್ ಪಂದ್ಯಾವಳಿ ನಿಲ್ಲಿಸುವುದು ಪರಿಹಾರವಲ್ಲ ಎಂದು ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ತಿಳಿಸಿದ್ದಾರೆ.

ವಿಧಾನಸೌಧದಲ್ಲಿಂದು ಮಾತನಾಡಿದ ಅವರು, “ಕಾಲ್ತುಳಿತ ದುರಂತ ಆಗಿದೆ ಎಂಬ ಕಾರಣಕ್ಕೆ ಪಂದ್ಯಾವಳಿ ನಿಲ್ಲಿಸೋದು ಪರಿಹಾರವಲ್ಲ. ಮತ್ತೆ ಅಂತಹ ಘಟನೆಗಳು ನಡೆಯದಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಂಡು ಆಟವಾಡಿಸಬೇಕು. ಪಂದ್ಯಾವಳಿ ನಡೆಯಬೇಕೆಂಬುದು ಎಲ್ಲರ ಬಯಕೆ. ದುರಂತ ಆಗಬಾರದಾಗಿತ್ತು, ಹನ್ನೊಂದು ಮಂದಿ ಸಾವನ್ನಪ್ಪಿದ್ದಾರೆ. ಈ ನೋವು ಸಾವನ್ನಪ್ಪಿದ ಕುಟುಂಬದವರಿಗೆ ಇದೆ” ಎಂದರು.

“ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್​ಸಿಎ) ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರ ತಂಡ ಮತ್ತೆ ಪಂದ್ಯಾವಳಿ ನಡೆಸಲು ಏನು ಮಾಡಬೇಕೋ ಅದನ್ನು ಮಾಡುತ್ತಾರೆ. ಎಲ್ಲ ಮಾರ್ಗಸೂಚಿಯನ್ವಯ ಕ್ರಿಕೆಟ್ ನಡೆಸಬೇಕು ಅಂತಾ ಸರ್ಕಾರ ಹೇಳಿದೆ. ಇದಕ್ಕೆಲ್ಲ ಸ್ವಲ್ಪ ಸಮಯಾವಕಾಶ ಬೇಕಾಗುತ್ತದೆ. ಸರ್ಕಾರ ಕ್ರಿಕೆಟ್ ಆಡಿಸುವ ಪ್ರಸ್ತಾವನೆ ತಿರಸ್ಕರಿಸಿಲ್ಲ. ನ್ಯಾ.ಕುನ್ಹಾ ವರದಿಯ ಶಿಫಾರಸುಗಳನ್ನು ಅಳವಡಿಸಲು ತಿಳಿಸಲಾಗಿದೆ. ಶಿಫಾರಸುಗಳಂತೆ ಕ್ರಮ ಕೈಗೊಂಡರೆ ಅನುಮತಿ ಕೊಡುವುದಾಗಿ ಸರ್ಕಾರ ತಿಳಿಸಿದೆ” ಎಂದು ಹೇಳಿದರು.

[pj-news-ticker]