Trending

ತೀರ್ಥಹಳ್ಳಿ: ತುಂಗಾ ನದಿಯಲ್ಲಿ ಈಜಲು ಹೋದ ವ್ಯಕ್ತಿ ಕಣ್ಮರೆ

Spread the love

ತೀರ್ಥಹಳ್ಳಿ: ಎಳ್ಳಮಾವಾಸ್ಯೆ ಜಾತ್ರೆಯ ಕೆಲಸಕ್ಕಾಗಿ ಬಂದಿದ್ದ ಯುವಕನೋರ್ವ ನೀರಲ್ಲಿ ಈಜಲು ಹೋಗಿ ಕಣ್ಮರೆಯಾಗಿರುವ ಘಟನೆ ಡಿ.18ರ ಗುರುವಾರ ರಾಮೇಶ್ವರ ದೇವಸ್ಥಾನದ ಹಿಂಭಾಗ ನಡೆದಿದೆ.

18 ವರ್ಷದ ಯುವಕನೊಬ್ಬ ಮಧ್ಯಾಹ್ನ ಈಜಲು ತೆರಳಿದ್ದು, ನೀರಿನ ಸೆಳೆತ ಹೆಚ್ಚಾಗಿರುವುದರಿಂದ ನೀರಿನಿಂದ ಹೊರಬರಲಾಗದೇ ಮುಳುಗಿದ್ದಾನೆ.

ಆತ ನೀರಿನಿಂದ ಹೊರಬರಲು ಪ್ರಯತ್ನಪಟ್ಟಿದ್ದ, ಆದರೆ ನೀರಿನಿಂದ ಮೇಲೆ ಬರಲು ಆಗಲಿಲ್ಲ ಎಂದು ಅಲ್ಲಿದ್ದ ಸ್ಥಳೀಯರು ತಿಳಿಸಿದ್ದಾರೆ.

ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಹಾಗೂ ಪೊಲೀಸರು ಧಾವಿಸಿದ್ದು, ಕಣ್ಮರೆಯಾದ ಯುವಕನಿಗೆ ತುಂಗಾ ನದಿಯಲ್ಲಿ ತೀವ್ರ ಶೋಧ ನಡೆಸುತ್ತಿದ್ದಾರೆ.

[pj-news-ticker]