Trending

ದರ್ಶನ್‌ ಮನೆಯಲ್ಲಿ ಪತ್ತೆಯಾದ 82 ಲಕ್ಷ ರೂ. ವಾಪಸ್‌ ನೀಡಲು ನಿರಾಕರಿಸಿದ ಕೋರ್ಟ್‌

Spread the love

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಜೈಲು ಪಾಲಾಗಿರುವ ಸ್ಯಾಂಡಲ್‌ವುಡ್‌ ನಟ ದರ್ಶನ್‌ ಅವರಿಗೆ ಇದೀಗ ಮತ್ತೊಂಡು ಆಘಾತ ಎದುರಾಗಿದೆ.

ದರ್ಶನ್‌ ನಿವಾಸದಲ್ಲಿ ಪತ್ತೆಯಾಗಿರುವ 82 ಲಕ್ಷ ರೂ. ಆದಾಯ ತೆರಿಗೆ ಇಲಾಖೆಯಲ್ಲೇ ಇರಲಿ ಎಂದು ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್‌ ಆದೇಶ ಹೊರಡಿಸಿದೆ. ಆ ಮೂಲಕ ದರ್ಶನ್‌ಗೆ ಮತ್ತೊಂದು ಹೊಡೆತ ಬಿದ್ದಿದೆ. ಕಾಮಾಕ್ಷಿಪಾಳ್ಯ ಪೊಲೀಸರು ದರ್ಶನ್ ಮನೆ ಮತ್ತು ಪ್ರದೋಷ್ ಮನೆಯಲ್ಲಿ ವಶಕ್ಕೆ ಪಡೆದ ಈ ಹಣವನ್ನು ಆದಾಯ ತೆರಿಗೆ ಇಲಾಖೆಗೆ ವರ್ಗಾಯಿಸಿದ್ದರು.

ತನಿಖೆ ನಡೆಸಿದ ಐಟಿ ಇನ್ನೂ ಸ್ಪಷ್ಟವಾದ ಮಾಹಿತಿ ನೀಡಿರಲಿಲ್ಲ. ಈ ಸಂದರ್ಭದಲ್ಲಿ ದರ್ಶನ್ 82 ಲಕ್ಷ ರೂ. ಹಣ ವಾಪಸ್‌ ನೀಡಲು ಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ ಇದೀಗ ಕೋರ್ಟ್‌ ಹಣ ಮರಳಿಸಲು ನಿರಾಕರಿಸಿದೆ.

ಇದೀಗ ವಾದ – ಪ್ರತಿವಾದ ಆಲಿಸಿದ ನ್ಯಾಯಾಲಯ 82 ಲಕ್ಷ ರೂ. ಐಟಿ ಬಳಿಯಲ್ಲೇ ಇರಲಿ, ತನಿಖೆ ಮುಂದುವರಿಯಲಿ ಎಂದು ಆದೇಶ ನೀಡಿದೆ. ಈ ಹಣ ಹೇಗೆ ಬಂತು ಎನ್ನುವುದನ್ನು ದರ್ಶನ್‌ ಪರ ವಕೀಲರು ವಾದಿಸಿದರೂ ಪ್ರಯೋಜನವಾಗಿಲ್ಲ.

ವಕೀಲರ ವಾದವೇನು?

ಮೋಹನ್‌ ರಾಜ್‌ಗೆ ಈ ಹಿಂದೆ ದರ್ಶನ್‌ ಸಾಲವಾಗಿ ಹಣ ನೀಡಿದ್ದರು. ಮೋಹನ್‌ ರಾಜ್‌ ಮರಳಿಸಿದ ಹಣವನ್ನು ದರ್ಶನ್‌ ಮನೆಯಲ್ಲಿಟ್ಟಿದ್ದರು ಎಂದು ವಕೀಲರು ವಾದಿಸಿದ್ದಾರೆ. ಇದಕ್ಕೆ ಆದಾಯ ತೆರಿಗೆ ಇಲಾಖೆಯು ದರ್ಶನ್‌ ಈ ಹಣಕ್ಕೆ ಸೂಕ್ತ ದಾಖಲೆಯನ್ನು ಸಲ್ಲಿಸಿಲ್ಲ ಎಂದು ಹೇಳಿದೆ. ಸದ್ಯ ಈ ಪ್ರಕರಣದಲ್ಲಿ ತನಿಖೆ ಮುಂದುವರಿಯಲಿದೆ.

[pj-news-ticker]