Trending

ಅಹಮದಾಬಾದ್‌ನಿಂದ ಹೊರಟಿದ್ದ ವಿಮಾನದಲ್ಲಿ ಬೆಂಕಿ: ‘ಮೇ ಡೇ’ ಘೋಷಣೆ; ತಪ್ಪಿದ ದುರಂತ

Spread the love

ಅಹಮದಾಬಾದ್: ದಿಯು ದ್ವೀಪದತ್ತ ಹೊರಟಿದ್ದ ಇಂಡಿಗೊ ವಿಮಾನದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪೈಲಟ್‌ ತಕ್ಷಣವೇ ಮೇ ಡೇ ಘೋಷಿಸಿದ್ದರಿಂದ ಪ್ರಯಾಣ ರದ್ದುಗೊಳಿಸಲಾಗಿದೆ. ಇದರಿಂದಾಗಿ ಭಾರಿ ದುರಂತ ತಪ್ಪಿದಂತಾಗಿದೆ.

IG07966 ವಿಮಾನದಲ್ಲಿ ಒಟ್ಟು 60 ಪ್ರಯಾಣಿಕರಿದ್ದರು.

ವಿಮಾನವು ಇಂದು ಬೆಳಿಗ್ಗೆ 11ಕ್ಕೆ ಟೇಕ್‌ ಆಫ್‌ ಆಗಬೇಕಿತ್ತು. ರನ್‌ ವೇಗೆ ತೆರಳುತ್ತಿದ್ದಾಗ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೀಗಾಗಿ, ವಿಮಾನ ಹಾರಾಟ ನಿಯಂತ್ರಕಕ್ಕೆ (ಎಟಿಸಿ) ಪೈಲಟ್‌ ‘ಮೇ ಡೇ, ಮೇ ಡೇ’ ಸಂದೇಶ ನೀಡಿದರು. ತಕ್ಷಣವೇ ಪ್ರಯಾಣ ಸ್ಥಗಿತಗೊಳಿಸಲಾಯಿತು. ವಿಮಾನದಲ್ಲಿದ್ದವರನ್ನು ತಕ್ಷಣವೇ ಕೆಳಗಿಳಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಇಂಡಿಗೊದಿಂದ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಅಹಮದಾಬಾದ್‌ನಲ್ಲಿ ಕಳೆದ ತಿಂಗಳು ಸಂಭವಿಸಿದ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಪ್ರಯಾಣಿಕರು, ಸಿಬ್ಬಂದಿ ಹಾಗೂ ವಿಮಾನ ಪತನಗೊಂಡ ಕಟ್ಟಡದಲ್ಲಿದ್ದವರೂ ಸೇರಿದಂತೆ 260 ಮಂದಿ ಮೃತಪಟ್ಟಿದ್ದರು.

ಆಗಲೂ ಪೈಲಟ್‌ ಮೇ ಡೇ ಘೋಷಣೆ ಮಾಡಿದ್ದರು. ಆದರೆ, ಅಷ್ಟರಲ್ಲೇ ವಿಮಾನ ಪತನಗೊಂಡಿತ್ತು. ಆ ದುರಂತದ ಬೆನ್ನಲ್ಲೇ, ಇಂದು ಮತ್ತೊಂದು ಅಪಾಯ ಎದುರಾಗಿತ್ತು.

[pj-news-ticker]