Trending

ಮಗಳ ಮೇಲಿನ ಲೈಂಗಿಕ ಕಿರುಕುಳ ವಿರೋಧಿಸಿದ ತಂದೆ ಮೇಲೆ ಮಾರಣಾಂತಿಕ ಹಲ್ಲೆ; ಇಬ್ಬರಿಗೆ ಕಠಿಣ ಜೈಲು ಶಿಕ್ಷೆ : ಶಿವಮೊಗ್ಗ ಕೋರ್ಟ್ ತೀರ್ಪು

Spread the love

ಶಿವಮೊಗ್ಗ: 16 ವರ್ಷದ ಮಗಳ ಮೇಲಿನ ಲೈಂಗಿಕ ದೌರ್ಜನ್ಯ ವಿರೋಧಿಸಿದ ತಂದೆಗೆ ಚಾಕುವಿನಿಂದ ಇರಿದ ಇಬ್ಬರಿಗೆ ಶಿವಮೊಗ್ಗ ಜಿಲ್ಲಾ ನ್ಯಾಯಾಲಯ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 41 ಸಾವಿರ ರೂ. ದಂಡ ವಿಧಿಸಿ ಆದೇಶ ಮಾಡಿದೆ.

ಘಟನೆ ಹಿನ್ನೆಲೆ: ಶಿವಮೊಗ್ಗ ಗ್ರಾಮಾಂತರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ 16 ವರ್ಷದ ಬಾಲಕಿ ಮೇಲೆ 27 ವರ್ಷದ ಯುವಕ ಲೈಂಗಿಕ ದೌರ್ಜನ್ಯ ನಡೆಸಿದ್ದ ಪ್ರಕರಣ ನಡೆದಿತ್ತು. ಇದಕ್ಕೆ ನೊಂದ ಬಾಲಕಿಯ ತಂದೆ ವಿರೋಧ ವ್ಯಕ್ತಪಡಿಸಿದ್ದರು.

ಇದರಿಂದ ಕೋಪಗೊಂಡ ಲೈಂಗಿಕ ದೌರ್ಜನ್ಯ ನಡೆಸಿದ ಯುವಕನ ಇನ್ನೋರ್ವ ಯುವಕನೊಂದಿಗೆ ಸೇರಿ ಬಾಲಕಿಯ ತಂದೆಯ ಮೇಲೆ ಹಲ್ಲೆ ನಡೆಸಿ ಚಾಕುವಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು.

ಈ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಅಂದಿನ ಪಿಎಸ್​ಐ ಶಿವಪ್ರಸಾದ್​ ಅವರು ಪ್ರಕರಣದ ತನಿಖೆ ನಡೆಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (FTSC-1)ಕ್ಕೆ ದೋಷರೋಪಪಟ್ಟಿ ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ವಾದ, ಪ್ರತಿವಾದ ನಡೆದು ಆರೋಪಿತರಿಬ್ಬರ ಆರೋಪ ಸಾಬೀತಾದ ಹಿನ್ನಲೆಯಲ್ಲಿ ನ್ಯಾಯಾಧೀಶರಾದ ನಿಂಗನಗೌಟ ಭ ಪಾಟೀಲ್ ಅವರು ಲೈಂಗಿಕ ಕಿರುಕುಳ‌ ನೀಡಿದ ಮೊದಲ ಆರೋಪಿಗೆ ಪೋಕ್ಸೋ ಕಾಯಿದೆ ಅಡಿ 4 ವರ್ಷ ಕಠಿಣ ಕಾರಾಗೃಹವಾಸ ಮತ್ತು 1 ಲಕ್ಷ 21 ಸಾವಿರ ರೂ ದಂಡವನ್ನು ವಿಧಿಸಿದ್ದಾರೆ.

ಎರಡನೇ ಆರೋಪಿಗೆ‌ 3 ವರ್ಷದ ಕಠಿಣ ಕಾರಾಗೃಹವಾಸ ಮತ್ತು 41 ಸಾವಿರ ರೂ ದಂಢ ವಿಧಿಸಿದ್ದಾರೆ. ನೊಂದ ಬಾಲಕಿಗೆ ಆರೋಪಿತರ ದಂಡದ ಹಣದಲ್ಲಿ 1 ಲಕ್ಷ ರೂ ಹಾಗೂ ಸರ್ಕಾರದಿಂದ 10 ಸಾವಿರ ರೂ ಪರಿಹಾರ ನೀಡಲು ಆದೇಶಿದೆ. ಸರ್ಕಾರಿ ವಕೀಲರಾದ ಶ್ರೀಧರ್ ಅವರು ವಾದ ಮಂಡಿಸಿದ್ದರು.

[pj-news-ticker]