ಚಿಕ್ಕಮಗಳೂರು: ಕಾರೊಂದರಲ್ಲಿ ಮದ್ಯ, ಸಿ.ಟಿ.ರವಿ ಭಾವಚಿತ್ರವುಳ್ಳ ಕ್ಯಾಲೆಂಡರ್ ಹಾಗೂ ಲಾಂಗ್ ಪತ್ತೆಯಾದ ಘಟನೆ ನಗರದ ಎಐಟಿ ಸರ್ಕಲ್ ನಲ್ಲಿ ಮಾ.26ರ ತಡ ರಾತ್ರಿ ನಡೆದಿದೆ.
ಬ್ರೇಕ್ ಡೌನ್ ಆಗಿ ಆಕ್ಸಿಡೆಂಟ್ ಆದ ಕಾರನ್ನು ಸ್ಥಳೀಯರು ತಳ್ಳಲು ಮುಂದಾದಾಗ ಚಾಲಕ ಹಾಗೂ ಅಲ್ಲಿದ್ದವರ ನಡುವೆ ಮಾತಿನ ಚಕಮಕಿ ನಡೆಯಿತು. ಕೆಲ ಹೊತ್ತಿನ ಗಲಾಟೆಯ ಬಳಿಕ ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದಂತೆ ಕಾರು ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಆ ಸಂದರ್ಭದಲ್ಲಿ ಕಾರ್ ನಲ್ಲಿ ಮದ್ಯದ ಬಾಟಲಿಗಳು, ಲಾಂಗ್, ಸಿ.ಟಿ.ರವಿ ಭಾವಚಿತ್ರವುಳ್ಳ ಕ್ಯಾಲೆಂಡರ್ ಪತ್ತೆಯಾಗಿದ್ದು, ಸ್ಥಳೀಯರು ಆ ವಸ್ತುಗಳನ್ನು ಕಾರಿನಿಂದ ಹೊರತೆಗೆದಿದ್ದಾರೆ.
ಸ್ಥಳಕ್ಕೆ ನಗರ ಠಾಣಾ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾರಿನಲ್ಲಿದ್ದ ಮದ್ಯದ ಬಾಟಲಿಗಳು, ಕ್ಯಾಲೆಂಡರ್, ಲಾಂಗ್ ವಶಕ್ಕೆ ಪಡೆದುಕೊಂಡಿದ್ದಾರೆ.