ಸೊರಬ : ಎಐಸಿಸಿ ಸದಸ್ಯರು, ರಾಜ್ಯ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರು, ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯ ಉಪಾಧ್ಯಕ್ಷರಾದ ಮಧು ಬಂಗಾರಪ್ಪ ನವರ ನೇತೃತ್ವದಲ್ಲಿ ಸೊರಬ ತಾಲ್ಲೂಕಿನ ತಾಳಗುಪ್ಪ ಗ್ರಾಮದ ಸರ್ವೇ ನಂ. 20 ರಲ್ಲಿ 6 ಕುಟುಂಬಗಳನ್ನು ಅರಣ್ಯಾಧಿಕಾರಿಗಳು ಒಕ್ಕಲೆಬ್ಬಸಿರುವ ವಿರುದ್ಧ ಇದೇ ತಿಂಗಳ 27ನೇ ತಾರೀಖು ಸೊರಬದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮಲೆನಾಡಿನ ಸಮಸ್ಯೆಗಳು ಮಿತಿಮೀರಿವೆ. ಸಾಗುವಳಿ ರೈತರ ಬದುಕು ಹದಗೆಟ್ಟಿದೆ. ಸೊರಬ ಭಾಗದ ರೈತರು 30 ವರ್ಷಗಳಿಂದ ಕಟ್ಟಿ ಬೆಳೆಸಿದ್ದ ತೋಟಗಳು ಸಂಪೂರ್ಣ ನಾಶಗೊಂಡಿವೆ. ಈ ಹಿನ್ನಲೆಯಲ್ಲಿ ಒಕ್ಕಲೆಬ್ಬಸಿರುವ ಕುಟುಂಬಸ್ಥರ ಜೊತೆಯಲ್ಲಿ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನೆಯನ್ನು ಏರ್ಪಡಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿರುವ ಮಧುಬಂಗಾರಪ್ಪನವರು ಪಕ್ಷತೀತಾವಾಗಿ ಸಾರ್ವಜನಿಕರು, ಸಂಘ-ಸಂಸ್ಥೆಯವರು ಭಾಗವಹಿಸಬೇಕೆಂದು ವಿನಂತಿಸಿದ್ದಾರೆ.
ಪ್ರತಿಭಟನೆಯೂ ದಿನಾಂಕ 27 ರ ಸೋಮರದಂದು ಬೆಳಿಗ್ಗೆ 10.00 ಘಂಟೆಗೆ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಿಂದ ಆರಂಭವಾಗಲಿದೆ.