Spread the love

ನವದೆಹಲಿ:“ಮೇ ತಿಂಗಳು ಬಂದರೆ, ನನ್ನ ಮಗಳು ಸತ್ತು 1 ವರ್ಷ, ಆದರೆ ಈವರೆಗೂ ನಾನು ಅವಳ ಅಂತ್ಯಸಂಸ್ಕಾರ ನೆರವೇರಿಸಿ ತರ್ಪಣ ಬಿಟ್ಟಿಲ್ಲ.

ನನ್ನ ಮಗಳನ್ನು ಕೊಂದ ಆರೋಪಿಗೆ ಗಲ್ಲುಶಿಕ್ಷೆ ಘೋಷಣೆಯಾದ ದಿನವೇ ಅವಳ ಆತ್ಮಕ್ಕೆ ಶಾಂತಿಕೋರಿ ತರ್ಪಣ ಬಿಡುತ್ತೇನೆ’ ಇದು ಶ್ರದ್ಧಾ ವಾಕರ್‌ ತಂದೆ ವಿಜಯ್‌ ವಾಕರ್‌ ಹನಿಗೂಡಿದ ಕಣ್ಣುಗಳಲ್ಲಿ ಅವಲತ್ತು ಕೊಂಡ ಪರಿ.

ಇನ್ನೊಂದು ತಿಂಗಳು ಕಳೆದರೆ, ದೇಶವನ್ನೇ ಬೆಚ್ಚಿಬೀಳಿಸಿದ್ದ ಶ್ರದ್ಧಾ ಕೊಲೆ ಪ್ರಕರಣ ನಡೆದು ಒಂದು ವರ್ಷ! ಆದರೆ, ಇನ್ನೂ ಮೃತ ಶ್ರದ್ಧಾಳ ದೇಹದ ತುಂಡುಗಳು ಅವರ ತಂದೆಯ ಕೈಸೇರಿಲ್ಲ. ದೆಹಲಿಯ ಸಾಕೇತ್‌ ಕೋರ್ಟ್‌ನಲ್ಲಿ ವಿಚಾರಣೆಗಾಗಿ ಹಾಜರಾಗಿದ್ದ ವಿಜಯ್‌ ವಾಕರ್‌ ಮಾಧ್ಯಮಗಳ ಜತೆ ಮಾತನಾಡಿದ್ದಾರೆ.

ಪ್ರಕರಣದ ವಿಚಾರಣೆಗಾಗಿ ದೇಹದ ತುಂಡುಗಳನ್ನು ಸಂಸ್ಕರಿಸಿ ಇಡಲಾಗಿದೆ. ಅದು ನಮ್ಮ ಕೈ ಸೇರದೇ, ತರ್ಪಣ ಬಿಡುವಂತೆಯೂ ಇಲ್ಲ. ಅದರ ಜತೆಗೆ ಆರೋಪಿ ಅಫ್ತಾಬ್‌ಗ ಶಿಕ್ಷೆಯಾದಾಗಲೇ ನನ್ನ ಮಗಳಿಗೆ ಅಂತ್ಯಸಂಸ್ಕಾರ ನೆರವೇರಿಸುವುದು ಎಂದು ನಾನು ನಿರ್ಧರಿಸಿದ್ದೇನೆ ಎಂದಿದ್ದಾರೆ.

 

 

Leave a Reply

Your email address will not be published. Required fields are marked *