ಟೀಂ ಇಂಡಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 10 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಬಲಿಷ್ಠ ಪುನರಾಗಮನ ಮಾಡಿದೆ. ಟೀಂ ಇಂಡಿಯಾ ನೀಡಿದ 118 ರನ್‌ಗಳ ಗೆಲುವಿನ ಸವಾಲನ್ನು ಆಸ್ಟ್ರೇಲಿಯಾ ಕೇವಲ 11 ಓವರ್‌ಗಳಲ್ಲಿ ಪೂರ್ಣಗೊಳಿಸಿತು.
ಆಸ್ಟ್ರೇಲಿಯಾದ ಆರಂಭಿಕ ಜೋಡಿ ಟ್ರಾವಿಸ್ ಹೆಡ್ ಮತ್ತು ಮಿಚೆಲ್ ಮಾರ್ಷ್ ಗೆಲುವಿಗೆ ಕಾರಣರಾದರು. ಇವರಿಬ್ಬರೂ 121 ರನ್‌ಗಳ ಅಜೇಯ ಜೊತೆಯಾಟವಾಡಿದರು. ಮಿಚೆಲ್ ಮಾರ್ಷ್ ಅಜೇಯ 66 ರನ್ ಗಳಿಸಿದರೆ, ಟ್ರಾವಿಸ್ ಹೆಡ್ ಔಟಾಗದೆ 51 ರನ್ ಗಳಿಸಿ ಅರ್ಧಶತಕವನ್ನು ಹಂಚಿಕೊಂಡರು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತನ್ನ ಮೊದಲ ಪಂದ್ಯದ ಸೋಲಿಗೆ ಪ್ರತೀಕಾರ ತೀರಿಸಿಕೊಂಡಿದೆ. ಅಲ್ಲದೆ 3 ಪಂದ್ಯಗಳ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿದೆ.