Breaking
Sat. Oct 12th, 2024

ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಬಿಡುಗಡೆಯಾಗಿದ್ದ ಅಪರಾಧಿ ಸಂತನ್ ಸಾವು

By Mooka Nayaka News Feb 28, 2024
Spread the love

ಚೆನ್ನೈ: ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಬಿಡುಗಡೆಯಾದ ಅಪರಾಧಿಗಳಲ್ಲಿ ಒಬ್ಬರಾಗಿದ್ದ ಸಂತನ್ ಅಲಿಯಾಸ್ ಸುಥೆಂತಿರಾಜ ಅವರು ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಬುಧವಾರ ನಿಧನರಾಗಿದ್ದಾರೆ.

ಅವರು ಕ್ರಿಪ್ಟೋಜೆನಿಕ್ ಸಿರೋಸಿಸ್‌ನಿಂದ ಬಳಲುತ್ತಿದ್ದರು ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಜನವರಿ 27 ರಂದು ಅವರನ್ನು ಚಿಕಿತ್ಸೆಗಾಗಿ ಆರ್‌ಜಿಜಿಜಿಎಚ್‌ಗೆ ದಾಖಲಿಸಲಾಗಿತ್ತು.

ಅವರ ಸ್ಥಿತಿ ಚಿಂತಾಜನಕವಾಗಿತ್ತು, ತಿರುಚ್ಚಿಯ ಮಹಾತ್ಮ ಗಾಂಧಿ ಸ್ಮಾರಕ ಸರ್ಕಾರಿ ಆಸ್ಪತ್ರೆಯಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿತ್ತು ಎಂದು ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯ ಅಧಿಕಾರಿಗಳು ಐಎಎನ್‌ಎಸ್‌ಗೆ ತಿಳಿಸಿದ್ದಾರೆ.ವಿಚಾರಣಾ ನ್ಯಾಯಾಲಯವು ಸಂತನ್‌ನಿಗೆ ಮರಣದಂಡನೆ ವಿಧಿಸಿತ್ತು ಮತ್ತು ನಂತರ ಅದನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಯಿತು.

32 ವರ್ಷಗಳಿಗೂ ಹೆಚ್ಚು ಕಾಲ ಜೈಲುವಾಸ ಅನುಭವಿಸಿ ವಿವಿಧ ಜೈಲುಗಳಿಂದ ನಳಿನಿ ಶ್ರೀಹರನ್, ಶ್ರೀಹರನ್ ಅಲಿಯಾಸ್ ಮುರುಗನ್, ರಾಬರ್ಟ್ ಪಯಸ್, ರವಿಚಂದ್ರನ್ ಮತ್ತು ಜಯಕುಮಾರ್ ಅವರೊಂದಿಗೆ ಬಿಡುಗಡೆಯಾಗಿದ್ದರು.

ಬಿಡುಗಡೆ ಬಳಿಕ, ನಳಿನಿ ಮತ್ತು ರವಿಚಂದ್ರನ್ ಭಾರತೀಯ ಪ್ರಜೆಗಳಾಗಿದ್ದರಿಂದ ಅವರು ತಮ್ಮ ಊರುಗಳಿಗೆ ತೆರಳಿದರು. ಆದರೆ, ಭಾರತಕ್ಕೆ ಅಕ್ರಮವಾಗಿ ನುಸುಳಿದ್ದ, ಶ್ರೀಲಂಕಾ ಪ್ರಜೆಗಳಾದ ಮುರುಗನ್, ಸಂತನ್ ಹಾಗೂ ಚೆನ್ನೈಗೆ ಸಮೀಪದ ಪುಝಲ್ ಕಾರಾಗೃಹದಿಂದ ಬಿಡುಗಡೆಯಾದ ರಾಬರ್ಟ್‌ ಪಯಾಸ್ ಮತ್ತು ಜಯಕುಮಾರ್ ಅವರನ್ನು ತಿರುಚ್ಚಿ ಕೇಂದ್ರ ಕಾರಾಗೃಹದ ಆವರಣದಲ್ಲಿರುವ ವಿಶೇಷ ನಿರಾಶ್ರಿತರ ಶಿಬಿರದಲ್ಲಿ ಇರಿಸಲಾಗಿತ್ತು.

Related Post