ಬಿಸಿಲಿನ ಧಗೆಯಿಂದ ಹೈರಾಣಾಗಿದ್ದ ಶಿವಮೊಗ್ಗದಲ್ಲಿ ವರುಣ ಪ್ರತ್ಯಕ್ಷವಾಗಿದ್ದಾನೆ. ಸಂಜೆ ವೇಳೆಗೆ ಮಳೆ ಸುರಿಯಲು ಶುರುವಾಗಿದೆ. ಇದರಿಂದ ನಗರದಲ್ಲಿ ವಾತಾವರಣ ತಂಪಾಗುವ ನಿರೀಕ್ಷೆ ಇದೆ.
ಶಿವಮೊಗ್ಗ ನಗರದಲ್ಲಿ ಬೆಳಗ್ಗೆ ಸ್ವಲ್ಪ ಹೊತ್ತು ಮೋಡ ಕವಿದ ವಾತಾವರಣವಿತ್ತು. ಕೆಲ ಸಮಯದ ಬಳಿಕ ಬಿಸಿಲು ಕಾಣಿಸಿಕೊಳ್ಳುತ್ತಿತ್ತು. ಸಂಜೆ ವೇಳೆಗೆ ಸಂಪೂರ್ಣ ಮೋಡ ಕವಿದು, ಗುಡುಗ ಸಹಿತ ಮಳೆ ಸುರಿಯಲು ಆರಂಭವಾಗಿದೆ.
ಸಮುದ್ರದ ಮೇಲ್ಮೈ ಸುಳಿಗಾಳಿಯಿಂದಾಗಿ ರಾಜ್ಯದ ವಿವಿಧೆಡೆ ಐದು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿತ್ತು. ಮಾ.14ರಿಂದ 18ರವರೆಗೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ತಿಳಿಸಲಾಗಿತ್ತು.