Spread the love

ಮೈಸೂರು: ಬೆಂಗಳೂರು- ಮೈಸೂರು ಹೈವೇಯನ್ನು ಮೋದಿ ಅಪ್ಪನ ಮನೆಯಿಂದ ಹಣ ತಂದು ನಿರ್ಮಾಣ ಮಾಡಿಲ್ಲ‌. ಪ್ರತಾಪ್ ಸಿಂಹ ಅಪ್ಪನ ಮನೆಯಿಂದ ಹಣ ತಂದು ಮಾಡಿಲ್ಲ. ಜನರ ತೆರಿಗೆ ಹಣದಿಂದ ನಿರ್ಮಾಣ ಮಾಡಲಾಗಿದೆ. ಆದರೂ ಹೈವೇಗೆ ದುಬಾರಿ ಟೋಲ್ ನಿಗದಿ ಮಾಡಿರೋದು ಸರಿಯಲ್ಲ ಎಂದು ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಕಿಡಿಕಾರಿದರು.

ಬೆಂಗಳೂರು ಮೈಸೂರು ಹೈವೇ ಕಾಮಗಾರಿ ಅವೈಜ್ಞಾನಿಕವಾಗಿದೆ. ಹೈವೇ ನಿರ್ಮಾಣದಿಂದ ಮಂಡ್ಯ ಜಿಲ್ಲೆಯ ಜನರಿಗೆ ತೀವ್ರ ತೊಂದರೆಯಾಗಿದೆ. ಹೈವೇ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಪ್ರಧಾನಿ ನರೇಂದ್ರಮೋದಿ ಬಂದು ಉದ್ಘಾಟನೆ ಮಾಡಿದ್ದಾರೆ. ಈ ಮೂಲಕ ತಾವು ಹೇಳಿದ್ದೇ ಸರಿ, ಮಾಡಿದ್ದೇ ಸರಿ ಎಂಬಂತೆ ವರ್ತಿಸುತ್ತಿದ್ದಾರೆ. ಹೈವೇ ಕಾಮಗಾರಿ ನೆಪದಲ್ಲಿ ಲೂಟಿ ಮಾಡಿದ್ದಾರೆ. 200 ಹೋಟೆಲ್, 90 ಪೆಟ್ರೋಲ್ ಬಂಕ್ ಗಳು ಬಂದ್ ಆಗಿವೆ. ಬಿಜೆಪಿಯವರು ಬಡ ಜನರ ಜೀವನದ ಜೊತೆ ಚೆಲ್ಲಾಟವಾಡ್ತಿದಾರೆ ಎಂದರು.

ಮೈಸೂರು ಬೆಂಗಳೂರು ಹೈವೇ ಕಾಮಗಾರಿಯಲ್ಲಿ ನಿಮಗೆ ಲಾಭವಾಗಿಲ್ಲವೇ ಪ್ರತಾಪ್ ಸಿಂಹ ಎಂದ ವಿಶ್ವನಾಥ್, ಮರಳು ಜಲ್ಲಿಕಲ್ಲು ಸರಬರಾಜು ಮಾಡಿದವರು ನಿಮ್ಮ ಸ್ನೇಹಿತರಲ್ಲವೇ? ಬೆಕ್ಕು ಕಣ್ಮುಚ್ಚಿಕೊಂಡು ಹಾಲು ಕುಡಿದರೇ ಪ್ರಪಂಚಕ್ಕೆ ಗೊತ್ತಾಗಲ್ವಾ? ಇವರಿಗೆ ಮಾನ ಮರ್ಯಾದೆ ಇಲ್ವಾ, ನಾಚಿಕೆ ಆಗಲ್ವಾ? ಉರಿಗೌಡ, ನಂಜೇಗೌಡ ಎಂಬುವರ ಹೆಸರೇಳಿಕೊಂಡು ರಾಜಕೀಯ ಮಾಡ್ತಿದಾರಲ್ಲಾ ಇವರಿಗೆ ಏನೆನ್ನಬೇಕು. ಇವರನ್ನು ತಂದು ಅಧಿಕಾರಕ್ಕೆ ಕೂರಿಸಿದ ನಾನು ಸಹ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಿದೆ ಎಂದರು.

Leave a Reply

Your email address will not be published. Required fields are marked *