ಅಯ್ಯೋ ವಿಷರೀತ ಸೆಕೆ, ಮೈಯೆಲ್ಲಾ ಬೆವರು ಈ ಮಾತು ಇತ್ತೀಚೆಗೆ ಕೇಳಿ ಬರುತ್ತಿದ್ದು, ಅಷ್ಟರ ಮಟ್ಟಿಗೆ ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಕೇವಲ ಮನುಷ್ಯರ ಸಮಸ್ಯೆ ಮಾತ್ರವಲ್ಲ, ಪ್ರಾಣಿಗಳಲ್ಲಿಯೂ ನೀವು ಕಾಣಬಹುದು. ಇದಕ್ಕೊಂದು ಉತ್ತಮ ನಿದರ್ಶನ ಎನ್ನುವಂತೆ ಇಲ್ಲೊಂದು ಗಜರಾಜ ತಾನಾಗಿಯೇ ಸೊಂಡಿಲಿನ ಸಹಾಯದಿಂದ ಸ್ನಾನ ಮಾಡುತ್ತಿರುವ ವಿಡಿಯೋ ಕಾಣಬಹುದು. ಈ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ನಿನ್ನೆ(ಮಾರ್ಚ್ 11) ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾದ ವಿಡಿಯೋ 24 ಗಂಟೆಗಳಲ್ಲಿಯೇ ಲಕ್ಷಾಂತರ ಜನರ ಮನಗೆದ್ದಿದೆ. 10ಸಾವಿರ ಲೈಕ್ಗಳು, 2 ಸಾವಿರ ರೀಟ್ವೀಟ್ ಪಡೆದುಕೊಂಡಿದೆ. ಆನೆ ಸ್ನಾನ ಮಾಡುವ ಮುದ್ದಾದ ವಿಡಿಯೋ ಇಲ್ಲಿದೆ ನೋಡಿ.
ಐಎಫ್‌ಎಸ್ ಅಧಿಕಾರಿ ಸುಸಂತ್ ನಂದಾ ಅವರು ಈ ವೀಡಿಯೊವನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಾಡು ಪ್ರಾಣಿಗಳನ್ನು ನಾಡಿನಲ್ಲಿ ಬಂಧಿಸಿಡುವುದರ ಬಗ್ಗೆ ನನ್ನ ಬೆಂಬಲವಿಲ್ಲ. ಆದರೆ ಈ ಮುದ್ದಾದ ವಿಡಿಯೋ, ಆನೆಯ ಬುದ್ಧಿವಂತಿಕೆ ನನ್ನ ಮನಸ್ಸನ್ನು ಗೆದ್ದಿದೆ ಎಂದು ಅವರು ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಆನೆಯು ಯಾವುದೇ ಮಾನವನ ಸಹಾಯವಿಲ್ಲದೆ ತನ್ನ ದೇಹದ ಭಾಗಗಳಿಗೆ ನೀರನ್ನು ಸಿಂಪಡಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.