ಮಂಡ್ಯ: ಕಾಂಗ್ರೆಸ್ ಮೋದಿಯ ಸಮಾಧಿಯ ಕನಸು ಕಾಣುತ್ತಿದೆ ಆದರೆ ಮೋದಿ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ಮಾಡುವುದರಲ್ಲಿ ತೊಡಗಿದ್ದಾರೆ. ಮೋದಿ ಬಡವರ ಜೀವನ ಸುಧಾರಣೆ ಮಾಡುವುದರಲ್ಲಿ ಬ್ಯಸಿಯಾಗಿದ್ದಾರೆ. ಕಾಂಗ್ರೆಸ್ ನವರಿಗೆ ಗೊತ್ತಿಲ್ಲ ಈ ದೇಶದ ಕೋಟಿ ಕೋಟಿ ತಾಯಂದಿರು ಸಹೋದರಿಯರ ಜನರ ಆಶೀರ್ವಾದವೇ ಮೋದಿಯ ಅತೀ ದೊಡ್ಡ ರಕ್ಷಣಾ ಕವಚವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮಂಡ್ಯ ಜಿಲ್ಲೆಯಲ್ಲಿ ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ವೇ ಉದ್ಘಾಟಿಸಿ ಸಮಾವೇಶದಲ್ಲಿ ಮಾತನಾಡಿದರು.
ಬೆಂಗಳೂರು- ಮೈಸೂರು ರಾಜ್ಯದ ಪ್ರಮುಖ ನಗರಗಳು. ಒಂದು ತಂತ್ರಜ್ಞಾನವಾದರೆ ಮತ್ತೊಂದು ಪರಂಪರೆಗೆ ಹೆಸರಾದ ನಗರ. ಎರಡೂ ನಗರವನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಸಂಪರ್ಕಿಸುವುದು ಹಲವು ಕಾರಣದಿಂದ ಮುಖ್ಯವಾಗಿದೆ. ಎಕ್ಸ್ ಪ್ರೆಸ್ ವೇ ಕಾರಣದಿಂದ ಈ ಭಾಗದಲ್ಲಿ ಅಭಿವೃದ್ದಿಯ ವೇಗವೂ ಹೆಚ್ಚಾಗಲಿದೆ. ರಾಮನಗರ, ಮಂಡ್ಯದಲ್ಲೂಐತಿಹಾಸಿಕ ಸ್ಥಳಗಳಿವೆ. ಹೀಗಾಗಿ ಇಲ್ಲಿಯ ಪ್ರವಾಸೋದ್ಯಮ ಹೆಚ್ಚಾಗುತ್ತದೆ. ಅಲ್ಲದೆ ಕಾವೇರಿ ಜನ್ಮಸ್ಥಳ ಕೊಡಗಿಗೂ ಹೋಗುವ ವ್ಯವಸ್ಥೆ ಸುಲಭವಾಗುತ್ತದೆ ಎಂದು ಮೋದಿ ಹೇಳಿದರು.
ಸಕ್ಕರೆ ನಗರ ಮಂಡ್ಯದ ಕಬ್ಬು ಬೆಳೆಯುವ ರೈತರಿಗೆ ಸಮಸ್ಯೆಗಳಿವೆ. ಕಬ್ಬು ಹೆಚ್ಚಾದರೂ ಸಮಸ್ಯೆ, ಕಡಮೆಯಾದರೂ ಸಮಸ್ಯೆ. ಕಾರ್ಖಾನೆಗಳ ಮೇಲೆ ಅವಲಂಬನೆ ಹೆಚ್ಚಿತ್ತು. ರೈತರ ಸಮಸ್ಯೆಗೆ ಪರಿಹಾರ ನೀಡಲು ಇಥೆನಾಲ್ ಉತ್ಪಾದನೆ ಮೂಲಕ ಉಪಾಯ ಮಾಡಿದೆ. ಇದರಿಂದ ಕಬ್ಬು ಬೆಳೆಗಾರರಿಗೂ ಸಹಾಯವಾಗಿದೆ. ಕೇಂದ್ರ ಬಜೆಟ್ ನಲ್ಲಿ ಕಬ್ಬು ಬೆಳೆಗಾರರಿಗೆ ಸಕ್ಕರೆ ಸಹಕಾರಿ ಸಂಘಗಳಿಗೆ 10 ಸಾವಿ ರ ಕೊಟಿ ಸಹಾಯಧನ, ತೆರಿಗೆ ವಿನಾಯತಿ ಮಾಡಲಾಗಿದೆ ಎಂದರು.
ಬಯೋ ಟೆಕ್ನಾಲಜಿಯಿಂದ ಹಿಡಿದು ರಕ್ಷಣಾ ವಲಯದವರೆಗೆ ಕರ್ನಾಟಕದಲ್ಲಿ ಎಲ್ಲಾ ವಯಲದಲ್ಲಿ ಅಭಿವೃದ್ದಿಯಾಗುತ್ತಿದೆ. ಕರ್ನಾಟಕ್ಕಕೆ ಡಬಲ್ ಇಂಜಿನ್ ಸರ್ಕಾರದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.