ಶಿವಮೊಗ್ಗ : ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ರೇಡಿಯೋ ಪಾಠಗಳು ರೇಡಿಯೋ ಶಿವಮೊಗ್ಗದಲ್ಲಿ ಮಾರ್ಚ್ 13ರಿಂದ ಪ್ರಸಾರವಾಗಲಿದೆ. ಪ್ರತಿದಿನ ಮಧ್ಯಾಹ್ನ 3 ಗಂಟೆಗೆ ಪ್ರಸಾರವಾಗಲಿದ್ದು, ಅದೇ ದಿನ ರಾತ್ರಿ 8 ಗಂಟೆಗೆ ಮರುಪ್ರಸಾರವಾಗಲಿದೆ.
ಮಾರ್ಚ್ 13ರಂದು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಸಿಇಒ, ಉಪಕಾರ್ಯದರ್ಶೀ ಮಲ್ಲಿಕಾರ್ಜುನ ತೊದಲಬಾಗಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಸ್ಫೂರ್ತಿದಾಯಕ ಮಾತುಗಳಿರುತ್ತದೆ. 14ರಂದು ಕನ್ನಡ, 15ರಂದು ಗಣಿತ, 16ರಂದು ಇಂಗ್ಲೀಷ್, 17ರಂದು ವಿಜ್ಞಾನ, 18ರಂದು ಹಿಂದಿ, 19ರಂದು ಸಮಾಜ ವಿಜ್ಞಾನದ ಪಾಠಗಳು ಪ್ರಸಾರವಾಗಲಿವೆ.
ರೇಡಿಯೋ ಶಿವಮೊಗ್ಗ 90.8 ಕಂಪನಾಂಕಗಳಲ್ಲಿ ಪ್ರಸಾರವಾಗುತ್ತಿದೆ. ರೇಡಿಯೋ ಶಿವಮೊಗ್ಗ ಆಪ್ ನ್ನು ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಪ್ಲೇ ಸ್ಟೋರ್ಸ್ ಅಥವಾ ಆಪಲ್ ಸ್ಟೋರ್ಸ್ ಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. ರೇಡಿಯೋ ಶೀವಮೊಗ್ಗ ವೆಬ್ ಸೈಟ್ ನಲ್ಲಿ ಕೂಡಾ ಲೈವ್ ಸ್ಟ್ರೀಮಿಂಗ್ ಇದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ರೇಡಿಯೋ ಶಿವಮೊಗ್ಗದ ನಿಲಯ ನಿರ್ದೇಶಕರಾದ ಜಿ.ಎಲ್. ಜನಾರ್ದನ್ ಕೋರಿದ್ದಾರೆ.