ಮುಂಬಯಿ: ಹೃದಯಾಘಾತದಿಂದ ಬಾಲಿವುಡ್ ನ ಹಿರಿಯ ನಟ ಸತೀಶ್ ಕೌಶಿಕ್ (66) ನಿಧನರಾಗಿದ್ದಾರೆ.
ಬಾಲಿವುಡ್ ನಲ್ಲಿ ಅನೇಕ ಹಾಸ್ಯ ಪಾತ್ರಗಳಲ್ಲಿ ಮಿಂಚಿ, ನಿರ್ದೇಶಕ, ನಿರ್ಮಾಪಕರಾಗಿಯೂ ಖ್ಯಾತಿಗಳಿಸಿದ್ದ ಸತೀಶ್ ಕೌಶಿಕ್ ಬುಧವಾರ ನಿಧನರಾಗಿದ್ದಾರೆ.ಬುಧವಾರ ಗುರುಗ್ರಾಮ್ ನಲ್ಲಿ ಆಪ್ತರೊಬ್ಬರನ್ನು ಭೇಟಿಯಾಗಲು ತೆರಳುತ್ತಿದ್ದಾಗ ಅವರ ಆರೋಗ್ಯದಲ್ಲಿ ಏರುಪೇರಾಗಿ ಹೃದಯಾಘಾತವಾಗಿದೆ. ನಟನ ನಿಧನಕ್ಕೆ ಬಾಲಿವುಡ್ ಸಿನಿರಂಗ ಕಂಬನಿ ಮಿಡಿದಿದೆ.