Spread the love

ಶಿವಮೊಗ್ಗ:- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ವತಿಯಿಂದ ಜಿಲ್ಲಾ ಮಟ್ಟದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅ. ೮ ರ ನಾಳೆ ಬೆಳಗ್ಗೆ ೧೦ ಗಂಟೆಗೆ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಪ್ರಶಸ್ತಿ ಪ್ರದಾನ ಮಾಡುವರು. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಅರಸಾಳು ರಂಗನಾಥ್ ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರನ್ನು ಸನ್ಮಾನಿಸಲಾಗುವುದು.

ಮುಖ್ಯ ಅತಿಥಿಗಳಾಗಿ ಶಾಸಕ ಎಸ್.ಎನ್. ಚನ್ನಬಸಪ್ಪ, ಸರ್ಕಾರಿ ನೌಕರರ ಸಂಘದ ರಾಜಧ್ಯಕ್ಷ ಸಿ.ಎಸ್. ಷಡಾಕ್ಷರಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಎನ್. ರವಿಕುಮಾರ್ ಉಪಸ್ಥಿತರಿದ್ದು, ರಾಜಧ್ಯಕ್ಷ ಶಿವನಾಂದ ತಗಡೂರು ಆಶಯ ನುಡಿಗಳನ್ನಾಡುವರು.

ಸಮಾರಂಭದಲ್ಲಿ ಪ್ರಶಸ್ತಿಯನ್ನು ವಿಜಯವಾಣಿ ಶಿವಮೊಗ್ಗ ವರದಿಗಾರ ನವೀನ್ ಬಿಲ್ಗುಣಿ, ವಿಜಯವಾಣಿ ಛಾಯಾಗ್ರಾಹಕ ಯೋಗರಾಜ್, ಉದಯವಾಣಿ ಭದ್ರಾವತಿ ವರದಿಗಾರ ಜಿ.ಎಸ್. ಸುದೀಂದ್ರ, ಪ್ರಜವಾಣಿ ಹೊಸನಗರ ವರದಿಗಾರ ನಾ. ರವಿ, ತೀರ್ಥಹಳ್ಳಿ ಪ್ರಜಾವಾಣಿ ವರದಿಗಾರ ನಿರಂಜನ, ಪ್ರಜಾವಾಣಿ ಆನವಟ್ಟಿ ವರದಿಗಾರ ರವಿ. ಆರ್. ತಿಮ್ಲಾಪುರ, ಶಿರಾಳಕೊಪ್ಪ ಪ್ರಜಾವಾಣಿ ವರದಿಗಾರ ಎಂ. ನವೀನ್ ಮತ್ತು ಸಂಯುಕ್ತ ಕರ್ನಾಟಕ ಸಾಗರ ವರದಿಗಾರ ಮಹೇಶ್ ಹೆಗ್ಡೆ ಅವರಿಗೆ ಪ್ರದಾನ ಮಾಡಲಾಗುವುದು.

ಹಾಗೆಯೇ ಅತ್ಯುತ್ತಮ ತಾಲೂಕು ಘಟಕದ ಪ್ರಶಸ್ತಿಯನ್ನು ಸೊರಬ ತಾಲೂಕು ಘಟಕಕ್ಕೆ ನೀಲಾಗುವುದು. ಸಂಘದ ಅಧ್ಯಕ್ಷ ನಾಗರಾಜ್ ಜೈನ್(ಬಣ್ಣದ ಬಾಬು) ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಹಾಗೆಯೇ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕೂಡ ಇದೇ ಸಂದರ್ಭದಲ್ಲಿ ನಡೆಸಲಾಗುವುದು. ಕಳೆದ ವರ್ಷದ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ. ೮೦ ಕ್ಕೂ ಅಕ ಅಂಕ ಪಡೆದ ಮಕ್ಕಳಿಗೆ ಪುರಸ್ಕಾರ ನೀಡಲಾಗುವುದು.

Leave a Reply

Your email address will not be published. Required fields are marked *