ನವದೆಹಲಿ: ಬಾಲಿವುಡ್ ಸಿನಿಮಾರಂಗದ ಹಿರಿಯ ನಟಿ ವಹೀದಾ ರೆಹಮಾನ್ ಅವರಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕ ಪ್ರಶಸ್ತಿ ನೀಡಲಾಗುವುದೆಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿನ ಅನುರಾಗ್ ಠಾಕೂರ್ ಅವರು ಟ್ವಿಟರ್ ನಲ್ಲಿ ಘೋಷಿಸಿದ್ದಾರೆ.
ವಹೀದಾ ರೆಹಮಾನ್ ಅವರಿಗೆ ಭಾರತೀಯ ಚಿತ್ರರಂಗಕ್ಕೆ ನೀಡಿದ ಅದ್ಭುತ ಕೊಡುಗೆಗಾಗಿ ಈ ವರ್ಷ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಜೀವಮಾನ ಸಾಧನೆಗಾಗಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಘೋಷಿಸಲು ನಾನು ಅಪಾರ ಸಂತೋಷವಾಗುತ್ತಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಕಳೆದ 5 ದಶಕಗಳಲ್ಲಿ ಭಾರತೀಯ ಸಿನಿಮಾಲೋಕದಲ್ಲಿ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ʼರೇಷ್ಮಾʼ ಮತ್ತು ʼಶೇರಾʼ ಚಿತ್ರದಲ್ಲಿನ ಅವರ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಸಂದಿದೆ. ಇದಲ್ಲದೆ ಅವರು ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಇದೀಗ ಅವರಿಗೆ ಅತ್ಯುನ್ನತ ಚಲನಚಿತ್ರ ಪ್ರಶಸ್ತಿ ಎಂದೇ ಪರಿಗಣಿತವಾಗಿರುವ, ಕೇಂದ್ರ ಸರ್ಕಾರ ನೀಡುವ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ.
ಈ ವರ್ಷ ದಾದಾಸಾಹೇಬ್ ಫಾಲ್ಕೆ ಜೀವಮಾನ ಸಾಧನೆ ಪ್ರಶಸ್ತಿಗೆ ವಹೀದಾ ರೆಹಮಾನ್ ಅವರನ್ನು ಆಯ್ಕೆ ಮಾಡಲಾಗಿದೆ. ಕಳೆದ ವರ್ಷ ಅಂದರೆ 2020 ಸಾಲಿನ ದಾದಾ ಸಾಹೇಬ್ ಪ್ರಶಸ್ತಿಗೆ ಆಶಾ ಪರೇಖ್ ಆಯ್ಕೆ ಆಗಿದ್ದರು.
ಟಾಲಿವುಡ್ ಸಿನಿಮಾದಿಂದ ಬಣ್ಣದ ಲೋಕ್ಕೆ ಕಾಲಿಟ್ಟ ಅವರು , ತಮಿಳು ಸಿನಿಮಾವನ್ನು ಮಾಡಿ ಆ ಬಳಿಕ ಬಾಲಿವುಡ್ ಸಿನಿಮಾರಂಗಕ್ಕೆ ಬಂದರು. ಬಾಲಿವುಡ್ ರಾಜೇಶ್ ಖನ್ನಾ, ರಾಜ್ ಕಪೂರ್, ಅಮಿತಾಭ್ , ದಿಲೀಪ್ ಕುಮಾರ್ ಸೇರಿದಂತೆ ಬಹುತೇಕ ದಿಗ್ಗಜ ನಟರೊಂದಿಗೆ ಅವರು ತೆರೆ ಹಂಚಿಕೊಂಡಿದ್ದಾರೆ.
ʼಪ್ಯಾಸಾʼ, ʼಕಾಗಜ್ ಕೆ ಫೂಲ್ʼ, ʼಚೌಧವಿ ಕಾ ಚಾಂದ್ʼ, ʼಸಾಹೇಬ್ ಬೀವಿ ಔರ್ ಗುಲಾಮ್ʼ, ʼಗೈಡ್ʼ, ʼಖಾಮೋಶಿʼ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.