Spread the love

ಶಿವಮೊಗ್ಗ : ಶ್ರೀಕಲಾ ಕೌಶಲ್ಯಾಭಿವೃದ್ಧಿ ಕೇಂದ್ರ, ಜಿಲ್ಲಾ ನಿವೃತ್ತ ನೌಕರರ ಸಂಘ ಹಾಗು ಪಿ. ಎನ್. ಆರ್. ಸೊಸೈಟಿ, ಭಾವನಗರ, ಗುಜರಾತ್ ಇವರ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್-11ರಂದು ನಗರದ ಜಿಲ್ಲಾ ನಿವೃತ್ತ ನೌಕರ ಸಂಘದ ಆವರಣದಲ್ಲಿ ಮಂಡಿನೋವು ಪಟ್ಟಿ ಚಿಕಿತ್ಸೆ ಶಿಬಿರ ನಡೆಯಲಿದೆ.

ಈ ಶಿಬಿರದಲ್ಲಿ ಕೇಂದ್ರ ಸರ್ಕಾರದ ಪ್ರಶಸ್ತಿ ವಿಜೇತ ವೈದ್ಯ ವಿಜಯನಾಯಕ್ ಮಂಡಿನೋವು ಅನುಭವಿಗಳನ್ನು ಪರೀಕ್ಷಿಸಿ ಶಸ್ತ್ರಚಿಕಿತ್ಸೆ ರಹಿತ ಪಟ್ಟಿ ಅಳವಡಿಸಿಕೊಳ್ಳಲು ಮಾಗ೯ದಶ೯ನ ನೀಡುವರು, ಆನಂತರ ಸ್ಥಳದಲ್ಲಿಯೆ ವೈದ್ಯಕೀಯ ತಂಡದಿಂದ ವಕ್೯ಶಾಪ್ ನಲ್ಲಿ ಪಟ್ಟಿ ತಯಾರಿಸಿ ಅಳವಡಿಸಲಾಗುವುದು.

ಮಂಡಿನೋವು ಅನುಭವಿಸುತ್ತಿರುವವರು ಮತ್ತು ಶಿಬಿರದಲ್ಲಿ ಪಟ್ಟಿ ಅಳವಡಿಸಿಕೊಳ್ಳಬಯಸುವವರು ಆರ್. ಟಿ. ನಟರಾಜ್ ಗೌರವ ಕಾಯ೯ದಶಿ೯ಗಳು ಮೊಬೈಲ್ ನಂ : 9448143165 ಶ್ರೀ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರ, ಮೊದಲಮಹಡಿ, ಜಿಲ್ಲಾ ನಿವೃತ್ತ ನೌಕರರ ಸಂಘದ ಕಟ್ಟಡ, ಆರ್. ಟಿ. ಒ. ಆಫೀಸ್ ರಸ್ತೆ, ಡಿ. ಸಿ. ಕಚೇರಿ ಆವರಣ, ಶಿವಮೊಗ್ಗ ಇಲ್ಲಿ ಮುಂಗಡವಾಗಿ ಹೆಸರು ನೊಂದಾಯಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು.

Leave a Reply

Your email address will not be published. Required fields are marked *